Vinaha

ದೂರವಾಣಿಯಲ್ಲಿ ನಿನ್ನ ಧ್ವನಿ ಕೇಳಿದೆ
ನೀ ದೂರವಾದ ವಿಷಯ ತಲುಪಿದೆ
ಹಸಿರಿನ ಹೃದಯಕೆ ಬರಗಾಲವು
ಬಂದಂತಿದೆ, ಬಂದಂತಿದೆ

ನೂರು ಪ್ರಶ್ನೆಗಳು ಇನ್ನ ಉಳಿದಿವೆ
ನಿನ್ನ ಎಲ್ಲ ಕಡೆ ನಾ ಹುಡುಕಿದೆ
ನೀನಿರದೆ ನನ್ನ ಸಮಯವು
ನಿಂತಂತಿದೆ, ನಿಂತಂತಿದೆ

ಸಖಿ, ಹೇಳು ಏಕೆ ನೀನು ದೂರವಾದೆ,
ನಿನ್ನ ವಿನಃ ಹೇಗೆ ನಾ ಇರಬಲ್ಲೆ
ಚಿಕ್ಕ ಪುಟ್ಟ ಮಾತುಕತೆ ನಮ್ಮ ನಡುವೆ
ನಡೆದಿದೆ ಬಿಟ್ಟು ಬಿಡುವು ಇರದೇ

ನಿನ್ನ ನಗು ನನ್ನ ಕನ್ನಡಿಯ ಮುಂದೆ
ಕಾಣಸಿಗದೇ ನಾನು ಮಂಕಾದೆ
ನನ್ನ ಪುಟ್ಟ ಮರಿ, ಜಾಣ ಮರಿ ನೀನೆ
ನೀನೆ ಬೇಕು ಅನ್ನೋ ಹಠ ಮನ ಬಿಡದೆ

ನಿನ್ನ Whatsapp ನ last seen ನ
ಮತ್ತೆ ಮತ್ತೆ ನೊಡ್ತಾ ಇರ್ತಿನ್
ನಾನ್ ನನ್ನ text ಮೇಲೆ blue tick ಗೆ ಕಾಯ್ತಿನ್
This psych mode has got me, I am not this
but hold on, I lost myself
ನಿನ್ ದಾರಿ ಕಾಯ್ತಾ ಇರ್ತಿನ್ ನಾನ್

ಅತಿ ಸುಲಭವೇ ಜೊತೆ ಕಳೆದಿರೋ ಆ ದಿನಗಳ ನೀ ಮರೆಯಲು?
ಅದು ಸಾಧ್ಯವೇ ಮಿತಿ ಮೀರಿದ ಈ ಪ್ರೀತಿಯ ಮರೆಮಾಚಲು?

ದೂರವಾಣಿಯಲ್ಲಿ ನಿನ್ನ ಧ್ವನಿ ಕೇಳಿದೆ
ನೀ ದೂರವಾದ ವಿಷಯ ತಲುಪಿದೆ
ಹಸಿರಿನ ಹೃದಯಕೆ ಬರಗಾಲವು
ಬಂದಂತಿದೆ, ಬಂದಂತಿದೆ

ನೂರು ಪ್ರಶ್ನೆಗಳು, ಇನ್ನ ಉಳಿದಿವೆ
ನಿನ್ನ ಎಲ್ಲ ಕಡೆ ನಾ ಹುಡುಕಿದೆ
ನೀನಿರದೆ, ನನ್ನ ಸಮಯವು
ನಿಂತಂತಿದೆ, ನಿಂತಂತಿದೆ



Credits
Writer(s): Rohit Shetty
Lyrics powered by www.musixmatch.com

Link