Baa Hosa Belake (From "Hope")

ಯಾತನೆ ನೂರು ಕೇಳುವರ್ಯಾರು
ಯಾರಲಿ ಈಗ ನೀಡಲಿ ದೂರು
ನ್ಯಾಯಕೆ ಯಾರೋ
ಬೆಲೆಯೇ ಕೊಡಲಾರರು

ಬಾ ಹೊಸ ಬೆಳಕೇ
ಅರಳಲು ಮೊಗ್ಗೊಂದು ಸಜ್ಜಾಗಿದೆ
ಈ ದಣಿದಿರುವ ನಯನಕೆ ಮಿಂಚೊಂದು ಬೇಕಾಗಿದೆ

ಮೌನ ಒಂದೇ ಮಾತು ಈಗ
ಮಾಗುತಿರುವ ಈ ಜೀವಕೆ
ಅಂತ್ಯವೆಂದೋ ಕಾಣದಿಂದು
ಸಾಗುತಿರುವ ಹೋರಾಟಕೆ

ಮಂಜು ಕವಿದಂಥ ದಾರಿ
ಓ ಯಾನವು ನಿಂತಿದೆ
ನಾಳೆ ಎನ್ನುವುದರ ಮೇಲೆ
ನಂಬಿಕೆ ಹೋಗಿದೆ

ಈ ದಣಿದಿರುವ ನಯನಕೆ ಮಿಂಚೊಂದು ಬೇಕಾಗಿದೆ
ಬಾ ಹೊಸ ಬೆಳಕೇ ಅರಳಲು ಮೊಗ್ಗೊಂದು ಸಜ್ಜಾಗಿದೆ

ಏರು ಪೇರು ಚೂರು ಚೂರು ಮಾಡಿದಂಥ ಆಲೋಚನೆ
ರೀತಿ ನೀತಿ ಕಾಣದೇನೆ ಸೋತು ನಿಂತ ಅನ್ವೇಷಣೆ
ಕಾಣದ ಕೈ ಬಂದು
ಓ ನೆಮ್ಮದಿ ದೋಚಿದೆ
ಆರದ ಗಾಯವೊಂದು ಮೂಡುತಾ ಕಾಡಿದೆ

ಬಾ ಹೊಸ ಬೆಳಕೇ
ಮನಸಿಗೆ ಮುದ ನೀನು ಕೊಡಬೇಕಿದೆ
ಈ ಪಯಣದಲಿ ನಗುವಿನ ನಿಲ್ದಾಣ ಸಿಗಬೇಕಿದೆ
ಹೇಳುವುದೊಂದು ಮಾಡುವುದೊಂದು
ಏತಕೆ ಹೀಗೆ ಲೋಕವು ಇಂದು
ಸಾಧನೆ ಹಾದಿ ಸುಲಭ ಇರಲಾರದು



Credits
Writer(s): Ghouse Peer, Ritvik Muralidhar
Lyrics powered by www.musixmatch.com

Link