Sanchariyagu Nee (From "Love Mocktail 2")

ದೂರ ಹೋದರೂ ನನ್ನೊಲವೆ
ನೂರು ಜನ್ಮಕೂ ಕಾಯುವೆ
ನನ್ನ ಪುಟ್ಟದೀ ಹೃದಯದಲಿ
ಬೇಡ ಎಂದರು ನೀ ಇರುವೆ
ಗೆಳೆಯ ಈ ಹುಚ್ಚು ಮನಸಲಿ ಸುರಿದ ಒಲವು ನಿನ್ನದೇ
ನಿನ್ನ ಜೊತೆಗೆ ನಾನಿರಲೆಂದು ಹಣೆಯಲಿ ಬರೆಯದೆ
ವಿಧಿಯೇ ಏಕೆ ನೀನು ಬದುಕಿಗೆ ತಿರುವಾದೆ?

ಈ ಬದುಕಿನ ಪಯಣಕು ತಿರುವು ಇದೆ
ಈ ತಿರುವಲು ದಾರಿಯು ಸಾಗುತಿದೆ
ದೇವರ ಆಟವೋ ಜೀವನ ಪಾಠವೋ
ಸಂಚಾರಿಯಗು ನೀ

ಈ ಬದುಕನು ಬರೆದವ ಯಾರು ದೊರೆ
ನೀ ಕನಿಕರ ತೋರದೆ ಹೋದರೆ
ನಿನ್ನಿಷ್ಟವೆಲ್ಲವೂ ಕಷ್ಟವೇ ಆದರೆ
ಹೇಗೀಗ ಬಾಳಲಿ?

ನಿನ್ನ ನೋಡದೆ ನಾ ಇರಲಾರೆ
ನಿನ್ನ ಕಾಣದೆ ಬದುಕಿರಲಾರೆ
ನಿನ್ನ ಸೇರದೆ ಅಗಲಿರಲಾರೆ ಉಸಿರೇ
ಮರೆಯಾದರೆ ಮರೆತಿರಲಾರೆ
ನೆನಪಾದರೆ ನಗುತಿರಲಾರೆ
ಮುನಿಸೇತಕೆ? ನನ್ನನು ಮನ್ನಿಸಿ ಬಾರೆ

ತನು ಮನನೆಲ್ಲ ನೀನಿರುವೆ
ನೀನಿರದೆ ನಾ ಹೇಗಿರಲಿ
ನಿನ್ನ ಸುಳಿವಾಗದೆ ಮನ ಮರೆತಾಗಿದೆ
ತಡ ಮಾಡದೆಯೇ ಬಂದುಬಿಡು

ನಿನಗಾಗಿಯೇ ಹುಡುಕಾಡುವೆ
ಓ ಪ್ರಾಣವೇ
ಓ ಪ್ರಾಣವೇ

ಯಾರಲ್ಲಿಯೂ ನಾನು ನಿನ್ನನು ಕಾಣನೇ
ನಿನ್ನದೇ ಸನಿಹ ಎಂದೂ ನನ್ನ ಜೊತೆಗಿರೆ
ಯಾರಲ್ಲಿಯೂ ನಾನು ಏನನು ಹೇಳಲೇ
ನೀನಿರೆ ಸಾಂತ್ವನ ನನ್ನ ಮನಸಿಗೆ
ಹೃದಯ ಪೂರ್ಣ ಆವರಿಸಿರುವ ಒಲವು ನಿನ್ನದೇ
ನೀನೇ ನನ್ನ ಜೊತೆಗಿರಬೇಕು ಎಂದು ಬಯಸಿದೆ
ನಿಧಿಮ ಹೇಳು ನೀನು ಇರೋ ಕಡೆ ನಾ ಬರುವೆ
ಭಯವಾಗಿದೆ ನೀನಿಲ್ಲದೆ
ಗುರಿ ಇಲ್ಲದೆ ಹುಡುಕಾಡುವೆ

ಈ ಬದುಕಿನ ಪಯಣಕು ತಿರುವು ಇದೆ
ಈ ತಿರುವಲು ದಾರಿಯು ಸಾಗುತಿದೆ
ದೇವರ ಆಟವೋ ಜೀವನ ಪಾಠವೋ
ಸಂಚಾರಿಯಗು ನೀ

ಈ ಬದುಕನು ಬರೆದವ ಯಾರು ದೊರೆ
ನೀ ಕನಿಕರ ತೋರದೆ ಹೋದರೆ
ನಿನ್ನಿಷ್ಟವೆಲ್ಲವೂ ಕಷ್ಟವೇ ಆದರೆ
ಹೇಗೀಗ ಬಾಳಲಿ?



Credits
Writer(s): Nakul Abhyankar, Raghavendra Kamath
Lyrics powered by www.musixmatch.com

Link