Jokke Jokke Meke

(ತಂದಾನೆ ತಾನೆ ನಾನೆ ನಾನೆ
ತಂದಾನೆ ತಾನೆ ನಾನೆ ನಾನೆ
ತಾನಾನೆ ತನ್ನಿನಾನಿ ನಾನೆ
ತಾನಾನೆ ತನ್ನಿನಾನಿ ನಾನೆ)

ಬೆಳಕನು ತಿಂತದೆ ಎಲೆ
(ಬೆಳಕನು ತಿಂತದೆ ಎಲೆ)
ಎಲೆಯನು ತಿಂತದೆ ಮೇಕೆ
(ಎಲೆಯನು ತಿಂತದೆ ಮೇಕೆ)
ಮೇಕೆಯ ತಿಂತದೆ ಹುಲಿ
(ಮೇಕೆಯ ತಿಂತದೆ ಹುಲಿ)
ಇದು ಹಸಿವಿನ ಹಾವಳಿ
(ಇದು ಹಸಿವಿನ ಹಾವಳಿ)

ಹುಲಿಯನೇ ತಿಂತದೆ ಸಾವು
ಸಾವನು ತಿಂತದೆ ಕಾಲ
ಕಾಲವನ್ನೇ ತಿಂತಾಳೆ ಕಾಳಿ
ಹಸಿವಿನ ಜಾವಳಿ

ಬೆನ್ಹತ್ತೋದು ಒಂದು
ಓಡೋದು ಇನ್ನೊಂದು
ಸಿಕ್ಕಿದರೆ ಇದು ಸತ್ಹಂಗೆ
ಸಿಗದೆ ಹೋದರೆ ಅದು ಸತ್ಹಂಗೆ
ಒಂದು ಜೀವಿಗೆ ಹಸಿವೆ ಆಗಿದೆಯಾ
ಮತ್ತೊಂದು ಜೀವಿಗೆ ಮರಣವು ಕಾದಂತೆ

(ಹೇ, ಜೋಕೆ ಜೋಕೆ ಮೇಕೆ
ಹೆಬ್ಬುಲಿ ಹಾಕಿದೆ ಕೇಕೆ, ಹುಯ್)

ಮೀನಿಗೆ ಹುಳುವೆ ಎರೆ
ಹಕ್ಕಿಗೆ ಕಾಳೆ ಎರೆ
ನಾಯಿಗೆ ಮಾಂಸದ ತುಂಡು ಎರೆ
ಮನುಜರಿಗೆಲ್ಲಾ ಬದುಕೆ ಎರೆ

ಗಂಗಮ್ಮ ತಾಯಿ ಜಾತರೆ
ಕೋಳಿ ಕುರಿಗಳ ಕುಯ್ತಾರೆ
ಕತ್ತಿಗೆ ನೆತ್ತರ ಹನಿ ಧಾರೆ
ದೇವತೆಗೂನೂ ತಪ್ಪದು ಎರೆ
ವಿಧಿ ಆ ಸೃಷ್ಟಿಯ ಕೈ ಸೆರೆ

ಎಚ್ಚರವನ್ನೇ ಕಳಕೊಂಡ್ರೆ
ಗಾಳಕೆ ಸಿಗುವೆ ನೀನು
ಗಾಳವ ನುಂಗೋ ಹಸಿವಿದ್ರೇನೆ
ಪ್ರಾಣದಿ ಉಳಿಯುವೆ ನೀನು, ಹಾ
ಹಸಿಯುವ ಹೊಟ್ಟೆ ನೋಡುವುದೇ ನೀತಿ ನ್ಯಾಯ
ಬಲ ಇದ್ದವನೇ ಆಳುವನೋ ಈ ಸಾಮ್ರಾಜ್ಯ

(ಹೇ, ಜೋಕೆ ಜೋಕೆ ಮೇಕೆ
ಹೆಬ್ಬುಲಿ ಹಾಕಿದೆ ಕೇಕೆ, ಹುಯ್)

ಕೇಳಲು ಹುಟ್ಟದು ಸಾಲವು
ಕೈ ಚಾಚಲು ಒಪ್ಪದು ಮನವು
ಹೊಡೆದರೆ ಕಳೆವುದು ಬರವು
ದೇವರಿಗೂ ಆ ಬಲವೇ ಒಲವು

ಹೊಡೆತವು ಮಾಡೋ ಒಳಿತು
ಒಡೆಯನು ಕೂಡ ಮಾಡನು
ಗುದ್ದಿ ಹೇಳುವ ಪಾಠ
ಬುದ್ಧನು ಕೂಡ ಹೇಳನು, ಹೇ



Credits
Writer(s): Devi Sri Prasad, Varadaraj Chikkaballapura
Lyrics powered by www.musixmatch.com

Link