Garbhadi

ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ
ತೇರಲಿ ಕುಳಿತಂತೆ ಅಮ್ಮ
ಗುಮ್ಮಾ ಬಂತೆನಿಸಿ ಹೆದರಿ ನಿಂತಾಗ
ನಿನ್ನ ಸೆರೆಗೇ ಕಾವಲು ಅಮ್ಮ
ಕಾಣದ ದೇವರಿಗೆ ಕೈಯ್ಯ ನಾ ಮುಗಿಯೆ
ನಿನಗೆ ನನ್ನುಸಿರೇ ಆರತಿ

(ತಂದಾನಿ ನಾನೇ ತಾನಿತಂದಾನೋ
ತಾನೇ ನಾನೇ ನೋ
ತಂದಾನಿ ನಾನೇ ತಾನಿತಂದಾನೋ
ತಾನೇ ನಾನೇ ನೋ)

ನೆರೆ ಬಂದ ಊರಲಿ
ಸೆರೆ ಸಿಕ್ಕ ಮೂಕರ
ಕಂಡ ಕನಸೇ ಕಣ್ಣ ಹಂಗಿಸಿದೆ
ನೆತ್ತರು ಹರಿದರೂ
ನೆಮ್ಮದಿ ಕಾಣದ
ಭಯವ ನೀಗುವ ಕೈ ಬೇಕಾಗಿದೆ
ಕಾಣದ ದೇವರನು
ನಿನ್ನಲಿ ಕಂಡಿರುವೆ
ನೀನೆ ಭರವಸೆಯು ನಾಳೆಗೆ

(ತಂದಾನಿ ನಾನೇ ತಾನಿತಂದಾನೋ
ತಾನೇ ನಾನೇ ನೋ
ತಂದಾನಿ ನಾನೇ ತಾನಿತಂದಾನೋ
ತಾನೇ ನಾನೇ ನೋ)
(ತಂದಾನಿ ನಾನೇ ತಾನಿತಂದಾನೋ
ತಾನೇ ನಾನೇ ನೋ
ತಂದಾನಿ ನಾನೇ ತಾನಿತಂದಾನೋ
ತಾನೇ ನಾನೇ ನೋ)



Credits
Writer(s): Ravi Basrur, Kinnal Raj
Lyrics powered by www.musixmatch.com

Link