Ondu Oorali

ಒಂದು ಊರಲಿ ಕೊನೆ ಬೀದೀಲಿ
ಇದ್ಲು ಒಬ್ಬಳು ಮುದ್ದು ದೇವತೆ

ಅವ್ಳ ಹೆಜ್ಜೆಯ ಧೂಳನ್ನ ವಿಭೂತಿ ಅಂದ್ಕೊಂಡು ಹಣೆಗೆ ಹಚ್ಕೋತಿದ್ದೆ
ಅವ್ಳು ನಕ್ಕಬುಟ್ರೆ ದೇವಸ್ಥಾನದ್ ಘಂಟೇನೆ ಹೊಡದಂಗೆ ಕೈ ಮೊಕ್ಕೊಂಡ್ ನಿಂತ್ಕೊತಿದ್ದೆ
ಅವ್ಳೆ ನನ್ನ ಪ್ರೀತಿ ದೇವತೆ
ಅನಿತಾ, ಓ ಅನಿತಾ
ಅನಿತಾ, ಓ ಅನಿತಾ

ಒಂದು ಊರಲಿ ಕೊನೆ ಬೀದೀಲಿ
ಇದ್ಲು ಒಬ್ಬಳು ಮುದ್ದು ದೇವತೆ

ಅವ್ಳು ನೋಡೋ style-u ನನ್ನ heart-u fail-u
Current ಹೊಡ್ದಂಗ್ ಹೊಡದ್ಬಿಟ್ಲು ಕಣೋ
ನೋಡಕ್ಕೆ ಎರಡು ಕಣ್ಣು ಸಾಲದಪ್ಪ ಇನ್ನು
ಹೋಲಿಕೆಗೆ ಯಾರಿಲ್ಲ ಕಣೋ
ಅವಳ ಮೇಲೆ ದೃಷ್ಟಿ ತಾಗದಂಗೆ
ಇಳಿಯ ತೆಗೆದೆ ಕಣ್ಣು ಬೀಳದಂಗೆ
ಭೂಮಿ ಸುತ್ತೋದ ಮರ್ತ್ರೂನು ನಾನ್ ಅವಳ ಹಿಂದೇನೆ ಸುತ್ತಾನೆ ಇದ್ದೆ ಕಣೋ
ನನ್ನ ಆಯಸೆಲ್ಲ ಅವ್ಳಗಾಗಿ transfer-u ಮಾಡಂತ ಮಾದಪ್ಪನ ಬೇಡ್ದೆ ಕಣೋ
ಆದ್ರು ನನ್ನ ಬಿಟ್ಟೆ ಹೋದಳು
ಅನಿತಾ, ಓ ಅನಿತಾ
ಅನಿತಾ, ಓ ಅನಿತಾ

ಪ್ರೀತಿನೇ ದೇವ್ರು ಅಂತ ಹೇಳ್ದೋರ್ಯಾರು ದೇವರೊಬ್ಬ business man ಕಣೋ
ಪ್ರೀತಿ ಸೃಷ್ಟಿ ಮಾಡಿ ಮೇಲೆ ಕುಂತೌನ್ನೋಡಿ
Courtesyನೇ ಇಲ್ದೋನು ಕಣೋ
ಎದೆಯ ಬಗೆದು ನಾ ಹೇಗೆ ತೋರಲಿ
ಪ್ರೀತಿ ಕೆಜಿಲ್ ನಾ ಹೇಗೆ ಅಳೆಯಲಿ
ಯಾರೋ historyನಾ ಬರ್ದೊರು ಪುಸ್ತಕಾನ ಒದ್ದೋರು
ಬಂದಿಲ್ಲಿ ಮಾತಾಡ್ರಪ್ಪ
ಪ್ರೀತಿ ಹಂಗಂತ ಹಿಂಗಂತ picture-a ತಗ್ದೊರು ಪ್ರೀತೀಲಿ ಬಿದ್ದ ನೊಡ್ರಪ್ಪ
Barಅಲ್ ಕುತ್ಕೊಂಡ್ ಕುಡದಂಗ್ ಅಲ್ರಪ್ಪ
ಅನಿತಾ, ಓ ಅನಿತಾ
ಅನಿತಾ, ಓ ಅನಿತಾ

ಒಂದು ಊರಲಿ ಕೊನೆ ಬೀದೀಲಿ
ಇದ್ಲು ಒಬ್ಬಳು ಮುದ್ದು ದೇವತೆ



Credits
Writer(s): Arjun Janya, Sharanakumar Gajendragada
Lyrics powered by www.musixmatch.com

Link