Neenirada Bege

ನೀನಿರದಾ ಈ ಬೇಗೆ
ಸಹಿಸುವುದೂ ಹೇಗೆ
ನೀನಿರದಾ ಈ ಬೇಗೆ
ಸಹಿಸುವುದೂ ಹೇಗೆ
ಮಾತುಗಳಾ ಜೊತೆ ಈ ಹಗೆ
ಮುರಿಯುವುದು ಹೇಗೆ
ನೀನಿರದಾ ಈ ಬೇಗೆ

ಅದೊಂದು ಕ್ಷುಲ್ಲಕ ಕಾರಣ
ನೀ ನನ್ನ ಬಿಟ್ಟು ಹೋದಾ ಕ್ಷಣ
ನನ್ನೊಳಗೆ ಭಾವನೆಗಳ ಮಂಥನ
ತನಿಯಾದಾಗ ಆಕ್ರಂದನ
ನೀ ಮತ್ತೆ ಸಿಗುವಾ ಕನಸಿಗೆ
ನೀ ಮತ್ತೆ ಸಿಗುವಾ ಕನಸಿಗೆ
ಕೊನೆ ಹೇಳುವುದು ಹೇಗೆ
ನೀನಿರದ ಈ ಬೇಗೆ

ನಿದ್ದೆ ಬರದ ಇರುಳುಗಳು
ಸದ್ದೇ ಇರದ ಹಗಲುಗಳು
ಮನಸ್ಸಿನ ನೆಲಮಾಳಿಗೆಯಲ್ಲಿ
ನಿನ್ನ ನೆನಪಿನ ಕುರುಹುಗಳು
ನನ್ನಂತರಂಗದ ಕಹಿಗಳಿಗೆ
ನನ್ನಂತರಂಗದ ಕಹಿಗಳಿಗೆ
ಹಿತ ಹೇಳುವುದು ಹೇಗೆ
ನೀನಿರದ ಈ ಬೇಗೆ
ಸಹಿಸುವುದು ಹೇಗೆ



Credits
Writer(s): Rajesh Sirsikar
Lyrics powered by www.musixmatch.com

Link