Eye Shoot

ಹದ್ದಿನ ನೋಟ
ವೇಗದ ಓಟ
ಸಮಯದ ಪಾಠ
ನನ್ನ ನಿನ್ನ ನಡುವೆ ಆಟ

ಹದ್ದಿನ ನೋಟ
ವೇಗದ ಓಟ
ಸಮಯದ ಪಾಠ
ನನ್ನ ನಿನ್ನ ನಡುವೆ ಆಟ

ಸರಿಸುವೆ ನಾನು ನಿನ್ನ
ಹೊಟ್ಟೆಗೆ ತಿನ್ನು ಅನ್ನ
ತಿಳಿಯಬೇಕು ನಾ ಇನ್ನ
ಗೊತ್ತು ತಾನೆ ಈಗ ನಾ

ಸರಿಸುವೆ ನಾನು ನಿನ್ನ
ಹೊಟ್ಟೆಗೆ ತಿನ್ನು ಅನ್ನ
ತಿಳಿಯಬೇಕು ನಾ ಇನ್ನ
ಗೊತ್ತು ತಾನೆ ಈಗ ನಾ

ಒಂದೆ ತಲೆ ಸಾವಿರ ಕೈ
ನಿನ್ನ ಸ್ಪರ್ಧೆಗೆ ನಾನು ಸೈ
ಅಡ್ಡ ಬಂದರೆ ಸೀಳುವೆ ಮೈ
ಹಿಂದೆ ಮುಂದೆ ನೋಡದೆ

ಒಂದೆ ತಲೆ ಸಾವಿರ ಕೈ
ನಿನ್ನ ಸ್ಪರ್ಧೆಗೆ ನಾನು ಸೈ
ಅಡ್ಡ ಬಂದರೆ ಸೀಳುವೆ ಮೈ
ಹಿಂದೆ ಮುಂದೆ ನೋಡದೆ

ತೀರದ ಪದಗಳ ರಭಸವ ಹೆಚ್ಚು
ಕಿಡಿ ಕಿಡಿ ಮಳೆಯ ಕಿಚ್ಚಿನೆ ಹಚ್ಚು
ಕಂಡರಿಯದ ಖಂಡಕೆ ಬಿಡಿಸುದೆ ಹುಚ್ಚು
ಮರೆಯೊದು ಹೇಗೆ ಮಾಡಿದ ಸಂಚು

ತೀರದ ಪದಗಳ ರಭಸವ ಹೆಚ್ಚು
ಕಿಡಿ ಕಿಡಿ ಮಳೆಯ ಕಿಚ್ಚಿನೆ ಹಚ್ಚು
ಕಂಡರಿಯದ ಖಂಡಕೆ ಬಿಡಿಸುದೆ ಹುಚ್ಚು
ಮರೆಯೊದು ಹೇಗೆ ಮಾಡಿದ ಸಂಚು

ಹದ್ದಿನ ನೋಟ
ವೇಗದ ಓಟ
ಸಮಯದ ಪಾಠ
ನನ್ನ ನಿನ್ನ ನಡುವೆ ಆಟ

ಹದ್ದಿನ ನೋಟ
ವೇಗದ ಓಟ
ಸಮಯದ ಪಾಠ
ನನ್ನ ನಿನ್ನ ನಡುವೆ ಆಟ

ದಿಕ್ಕುಗಳನ್ನೆ ದಿಕ್ಕರಿಸಿ
ಬೆಂಕಿ ನೀರನ್ನ ಸಿಂಪಡಿಸಿ
ನಲಿವಲಿ ಪರವಶ ನಿಂತರೆ ಆಕ್ರೋಶ
ನೋಟದ ಅರಿತಕೆ ಆಗುವೆ ವಿಧಿವಶ

ದಿಕ್ಕುಗಳನ್ನೆ ದಿಕ್ಕರಿಸಿ
ಬೆಂಕಿ ನೀರನ್ನ ಸಿಂಪಡಿಸಿ
ನಲಿವಲಿ ಪರವಶ ನಿಂತರೆ ಆಕ್ರೋಶ
ನೋಟದ ಅರಿತಕೆ ಆಗುವೆ ವಿಧಿವಶ

ನನ್ನ ಕೋಟೆಯಾ ಸುತ್ತಿ
ಬರುವೆಯಾ ನೀನು ಹತ್ತಿ
ನನ್ನ ಪದಗಳ ತೀಕ್ಷ್ಣದ ರೀತಿ
ಸೋಲೆ ಕಟ್ಟಿಟ್ಟ ಬುತ್ತಿ

ನನ್ನ ಕೋಟೆಯಾ ಸುತ್ತಿ
ಬರುವೆಯಾ ನೀನು ಹತ್ತಿ
ನನ್ನ ಪದಗಳ ತೀಕ್ಷ್ಣದ ರೀತಿ
ಸೋಲೆ ಕಟ್ಟಿಟ್ಟ ಬುತ್ತಿ

ರಕ್ಕಸ ಸೈನ್ಯವೆ ಬಂದರು
ಯುದ್ಧವೆ ಈಗ ನಡೆದರು
ಅರಿಸುವೆ ಅವರ ನೆತ್ತರು
ನನ್ನ ತಡೆಯೊರಿಲ್ಲ ಯಾರು

ರಕ್ಕಸ ಸೈನ್ಯವೆ ಬಂದರು
ಯುದ್ಧವೆ ಈಗ ನಡೆದರು
ಅರಿಸುವೆ ಅವರ ನೆತ್ತರು
ನನ್ನ ತಡೆಯೊರಿಲ್ಲ ಯಾರು

ಹದ್ದಿನ ನೋಟ
ವೇಗದ ಓಟ
ಸಮಯದ ಪಾಠ
ನನ್ನ ನಿನ್ನ ನಡುವೆ ಆಟ

ಹದ್ದಿನ ನೋಟ
ವೇಗದ ಓಟ
ಸಮಯದ ಪಾಠ
ನನ್ನ ನಿನ್ನ ನಡುವೆ ಆಟ

ಕನ್ನಡ ಪದಗಳ ಮೆರೆಸಲು
ಮನಸಿಂದ ಮಾಡಿದೆ ಒಂದು ಪ್ರಯತ್ನ
ಕನಸೊಂದು ನನಸಿಗೆ ನೂರು ಭಾರಿ ಸೋತರು
ಮನಸಿಂದ ಮಾಡುವೆ ಯತ್ನ

ಕನ್ನಡ ಪದಗಳ ಮೆರೆಸಲು
ಮನಸಿಂದ ಮಾಡಿದೆ ಒಂದು ಪ್ರಯತ್ನ
ಕನಸೊಂದು ನನಸಿಗೆ ನೂರು ಭಾರಿ ಸೋತರು
ಮನಸಿಂದ ಮಾಡುವೆ ಯತ್ನ

ಇದು ಮಿಶ್ರಣವಲ್ಲ ಪರಿಶುದ್ಧ
ನಾ ಮೌನದಿ ಕೂರುವೆ ಅಲ್ಲ ಬುದ್ಧ
ಸಿದ್ಧ ನಾ ಸಮಯಕೆ ಬದ್ದ
ಕೇಳು ಬಾ ನನ ಗುಂಡಿಗೆಯಾ ಶಬ್ದ

ಇದು ಮಿಶ್ರಣವಲ್ಲ ಪರಿಶುದ್ಧ
ನಾ ಮೌನದಿ ಕೂರುವೆ ಅಲ್ಲ ಬುದ್ಧ
ಸಿದ್ಧ ನಾ ಸಮಯಕೆ ಬದ್ದ
ಕೇಳು ಬಾ ನನ ಗುಂಡಿಗೆಯಾ ಶಬ್ದ

ಹದ್ದಿನ ನೋಟ
ವೇಗದ ಓಟ
ಸಮಯದ ಪಾಠ
ನನ್ನ ನಿನ್ನ ನಡುವೆ ಆಟ

ಹದ್ದಿನ ನೋಟ
ವೇಗದ ಓಟ
ಸಮಯದ ಪಾಠ
ನನ್ನ ನಿನ್ನ ನಡುವೆ ಆಟ

ಸುಭಾಷ್ ನಂದು



Credits
Writer(s): Subhash Nandu
Lyrics powered by www.musixmatch.com

Link