Baare Baa Baare

ಗಮಗನಿದಾ

ಅಮ್ಮ ಅಮ್ಮ ಹೇಳಮ್ಮ
ಬಣ್ಣ ಅಂದರೆ ಏನಮ್ಮ?
ಭಾವಗಳಿಂದಲೇ ಬಾಳಮ್ಮ
ಬಣ್ಣ, ಬಣ್ಣ, ಅದರ ಮುಖವಮ್ಮ
ಅಪ್ಪ ಅಪ್ಪ ಹೇಳಪ್ಪ
ಬೆಳಕು ಅಂದರೆ ಏನಪ್ಪಾ?
ಬೆಂಕಿ ಬೆಳಕೇ ಜಗವಮ್ಮ
ನೋವೇ ಬೆಂಕಿ
ನಲಿವೆ ಬೆಳಕಮ್ಮ

ಕತ್ತಲೆ ಅಂದರೆ ಏನಮ್ಮ?
ಬೆಳಕೇ ಇಲ್ಲದ ಜಗವಮ್ಮ
ಲೋಕ ಅಂದರೆ ಏನಪ್ಪಾ?
ಅಪ್ಪ ಅಮ್ಮ ಮಗುವಮ್ಮ
ಗಾಳಿಯು ಯಾಕೆ ಸುಡದಮ್ಮ?
ಒಂದೆಡೆ ಯಾಕೆ ನಿಲದಮ್ಮ?
ಗಾಳಿಗೆ ರೂಪ ಇಲ್ಲಮ್ಮ
ದೇವರ ಮಾಯೆ ಅದು ಅಮ್ಮ
ದೇವರು ಯಾರಮ್ಮ, ಅವನಿಗೂ ಕುರುಡಾಮ್ಮ
ಕುರುಡನು ನಿಜವಮ್ಮ ನೋಡಲು ಸಿಗನಮ್ಮ

ಅಪ್ಪ ಅಪ್ಪ ಹೇಳಪ್ಪ
ವಿದ್ಯೆ ಅಂದರೆ ಏನಪ್ಪಾ?
ಕಳುವೇ ಆಗದ ಸಿರಿ ಅಮ್ಮ
ದುಡ್ಡೇ ದೊಡ್ಡಪ್ಪ
ವಿದ್ಯೆ ಅವರಪ್ಪ

ಹೂಗಳು ಯಾಕೆ ನಗವಮ್ಮ
ನಕ್ಕರೂ ಸದ್ದು ಇರದಮ್ಮ
ಕಣ್ಣಲಿ ನೀರು ಯಾಕಮ್ಮ
ಚಿಂತೆಯ ಹೊತ್ತು ತರಲಮ್ಮ
ಕೋಗಿಲೆ ಹಾಗೆ ಕಾಗೆಗಳ ಕಂಠವು ಯಾಕೆ ಇಂಪಿಲ್ಲ
ಸೃಷ್ಟಿಯು ಮಾಡೋ ಅಡುಗೆಯಲಿ ತಪ್ಪೇ ಹುಡುಕೋ ಹಾಗಿಲ್ಲ
ಕುರುಡಿ ನಾನ್ಯಾಕಮ್ಮ ಯಾರದೀ ತಪಮ್ಮ
ತಪ್ಪಿನ ಅರಿವನ್ನು ಅರಿಯದ ತಪ್ಪಮ್ಮ

ಅಮ್ಮ ಅಮ್ಮ ಹಾಡಮ್ಮಾ
ಹಾಡಿಗೆ ಸೋಲೋದ್ಯಾಕಮ್ಮ
ಹಾಡಿಗೆ ಸೋಲೇ ಇಲ್ಲಮ್ಮ
ಮಾತು ಅಮ್ಮ
ಹಾಡು ಅವರಮ್ಮ



Credits
Writer(s): Hamsalekha Hamsalekha
Lyrics powered by www.musixmatch.com

Link