Bejaru

ಬೇಜಾರು ನನಗ್ಯಾರು
ಈ ಸಾಲು ಸರಿ ಏನು
ಕೇಳಿದ್ದೇನು ಮಾಡಿದ್ದೇನು
ಎಂದು ಹೇಳೇನು ಬೇರೇನು

ಭಾವನೆ ಬರೋದು ಮನಸ್ಸಿಂದ
ನೂತನ ಪ್ರಯತ್ನ ಈಗಲಿಂದ
ಬರೆದೆ ನಾನು ಪ್ರಬಂಧ
ಜನರಿಗೆ ಪರಿಚಯ ಇದರಿಂದ

ನನ್ನ ಪದಗಳ ವೇಗ ಹೃದಯದ ಭಾಗ
ತಲುಪುವವರೆಗು ಕಾಯುವೆ
ದಿನಗಳು ಕಳೆದರು ಕಥೆಯನೆ ಬರೆದರು
ಬೇಡದವರನ್ನು ದರ ದರನೆ ಎಳೆದ್ತಂದ್ದು
ಗಿಡವನು ನೆಟ್ಟಿ ನೆರಳನ್ನ ಬಯಸಲು
ಮನಸನು ಗಟ್ಟಿ ಮಾಡಲು ಏನು
ಸರಿ ತಪ್ಪು ಸರಿಸುವೆ ಮನಸಲಿ ಹರಸುವೆ
ಗೆಳೆತನ ಬೆಳೆಸುವೆ ಅನುಸರಿಸುವೆ

ನನ್ನ ನೋಟವು ಎಂದು ಎತ್ತರ
ಮಾತಲಲ್ಲ ಹೇಳೋದು ಉತ್ತರ
ಪ್ರಶ್ನೆ ನನ್ನದು ಯಾಕೊ ಒಂತರ
ಸಾಧನೆಗಾಗಿ ನನ್ನ ಕಾತುರ

ಆತುರ ಬೇಡ ಬೆಳೆಯಲು ಬೇಗ
ಸ್ವಲ್ಪ ಕಡಿಮೆ ನನ್ನ ವೇಗ
ವಿಚಲಿತ ಆಗದೆ ಬುದ್ಧಿಗೆ ಬೀಗ
ಕನ್ನಡಕ್ಕಾಗಿ ಜೀವನ ತ್ಯಾಗ

ತಲೆಯಲಿ ಸಾಹಿತ್ಯ ಅಧಿಕ
ನಾನೊಬ್ಬ ಅನಾಮಿಕ
ವರ್ಣನೆ ಮಾಡುವೆ ಅನೇಕ
ಈ ಸಾಲುಗಳೇ ಪ್ರತ್ಯೇಕ

ತಿಳಿಯ ಬಲ್ಲೆ ನಾ ಸಂದರ್ಭ
ಅದಕ್ಕಾಗಿಯೇ ಈ ಗರ್ವ
ಗಳಿಸಿ ಪಡೆಯ ಬೇಕು ಸರ್ವ
ಏರುವೆ ಸಾಧನೆಯಾ ಪರ್ವ

ಬೇಜಾರು ನನಗ್ಯಾರು
ಈ ಸಾಲು ಸರಿ ಏನು
ಕೇಳಿದ್ದೇನು ಮಾಡಿದ್ದೇನು
ಎಂದು ಹೇಳೇನು ಬೇರೇನು

ಬೇಜಾರು ನನಗ್ಯಾರು
ಈ ಸಾಲು ಸರಿ ಏನು
ಕೇಳಿದ್ದೇನು ಮಾಡಿದ್ದೇನು
ಎಂದು ಹೇಳೇನು ಬೇರೇನು

ತಿಳಿಯಲು ಅಲೆದಾಡಿದೆ ಸರಿಯಾದ ದಾರಿಯಾ ಹುಡುಕಿದೆ
ತಲೆಯಲಿ ಮುನ್ಸೂಚನೆ ಕಾಡಿದೆ
ತಡೆಯಿದೆ ಗುರಿ ತಲುಪಲು ಮನಸಿದೆ
ಮನಸ್ಸಾಗಿದೆ ನನಗನಿಸಿದೆ ಉತ್ತರ ತಿಳಿಯಲು
ಸರಿಯಾದ ಸಮಯ ಬಾರದು
ನನಗೇನೇ ಈತರ ಆಗೋದು
ಗುರಿ ಮುಟ್ಟಲು ಗುರು ಏತಕೆ

ಮನಸಿಗೆ ಒಂತರ ತಿಳಿಯದ ಉತ್ತರ
ಏತಕೆ ಕಾತುರ ಇರಲೀ ಅಂತರ
ನಂತರ ಆಕಾಶ ಮುಟ್ಟೊ ಎತ್ತರ
ಬರೊದಿಲ್ಲ ಸೆಡೆಗಳು ಹತ್ತಿರ

ನನಗ್ಯಾರು
ಈ ಸಾಲು ಸರಿ ಏನು
ಕೇಳಿದ್ದೇನು ಮಾಡಿದ್ದೇನು
ಎಂದು ಹೇಳೇನು ಬೇರೇನು

ಬೇಜಾರು ನನಗ್ಯಾರು
ಈ ಸಾಲು ಸರಿ ಏನು
ಕೇಳಿದ್ದೇನು ಮಾಡಿದ್ದೇನು
ಎಂದು ಹೇಳೇನು ಬೇರೇನು

ಸುಭಾಷ್ ನಂದು ಮೈಸೂರಿಂದ



Credits
Writer(s): Subhash Nandu
Lyrics powered by www.musixmatch.com

Link