Prema Prema

ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ದೇವ ತಂದ ಉಡುಗೊರೆ ಜೀವ ಸಂಗಮ
ಕಾರಣವೇ ಇಲ್ಲವು ಪ್ರೇಮ ಹುಟ್ಟಲು
ಕಣ್ಣುಗಳು ಮೌನದ ಭಾಷೆ ಆಡಲು
ಸಾವಿರ ಸಾವಿರ ಕಥೆಗಳ ಸಾಗರ
ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ದೇವ ತಂದ ಉಡುಗೊರೆ ಜೀವ ಸಂಗಮ

ಪ್ರಥಮ ಪ್ರಥಮ ಸ್ಪರ್ಶದೇ, ಮಾತು ಹಾಗೆ ನಿಂತಿತು
ಕುದುರೆ ಹಾಗೆ ನಾಡಿಯು, ವೇಗದಿಂದ ಓಡಿತು
ಪ್ರೇಮ ಬಂದ ಆ ಕ್ಷಣ ಹರುಷ ನೂರು ಚಿಮ್ಮಿತು
ಹೆಜ್ಜೆ ಭೂಮಿ ಸೋಕದೆ ಗಾಳಿಯಲ್ಲೇ ತೇಲಿತು
ಅನುಭವ ಹೊಸದು, ಅಲೆ ಅಲೆಯಾಗಿ ಮನವ ತುಂಬಿತು
ಪ್ರಕೃತಿಯೇ ಆಗ ಕಣ್ಣಲ್ಲಿ ಹೊಸದು ರೂಪ ತಾಳಿತು
ಯಾವ ಕವಿ ಕಾಣದಂಥ
ಯಾರು ಮುಂಚೆ ಹಾಡದಂಥ
ಹೊಸ ಹೊಸ ಕವಿತೆಯ ಜೀವ ಆಗ ಹಾಡಿತು

ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ದೇವ ತಂದ ಉಡುಗೊರೆ ಜೀವ ಸಂಗಮ

ಸಿಹಿಯ ಕೊಟ್ಟ ಪ್ರೇಮವು ಕಹಿಯ ಕೂಡ ತಂದಿತು
ಹೂವ ಜೊತೆ ಮುಳ್ಳಿದೆ ಎಂಬ ಸತ್ಯ ಸಾರಿತು
ನಗೆಯ ಚೆಲ್ಲಿದ ಮುಖ ಕಣ್ಣ ನೀರ ತಂದಿತು
ಬೆನ್ನ ಹಿಂದೆ ಮೋಸದಾ ಚೂರಿಯನ್ನು ಹಾಕಿತು
ಜೀವನವೆಂಬ ಹೂಬನ ಮರಳು ಗಾಡಿಯಾಯಿತು
ಆಸೆಗಳೆಂಬ ಹೂಗಳು ಬಾಡಿ ಉದುರಿ ಹೋಯಿತು
ಪ್ರೇಮ ಒಂದು ಶಾಪವೋ
ಮನಸು ಗೈದು ಪಾಪಾವೋ
ದೇವಾ ನಿನ್ನ ಆಟಕೆಲ್ಲ ಲೆಕ್ಕ ನಾನು ಮಾಡೆನು

ಪ್ರೇಮ ಪ್ರೇಮ ಬಂದರೆ ಎಂಥ ಸಂಭ್ರಮ
ದೇವ ತಂದ ಉಡುಗೊರೆ ಜೀವ ಸಂಗಮ
ಕಾರಣವೇ ಇಲ್ಲವು ಪ್ರೇಮ ಹುಟ್ಟಲು
ಕಣ್ಣುಗಳು ಮೌನದ ಭಾಷೆ ಆಡಲು
ಸಾವಿರ ಸಾವಿರ ಕಥೆಗಳ ಸಾಗರ



Credits
Writer(s): Veturi Sundararama Murthy, S R Koteswara Rao, Tv Soma Raju
Lyrics powered by www.musixmatch.com

Link