Sahapaati

ಇರು ನೀ ಜೊತೆ
ಬದುಕಿನ ತರಗತಿಯೊಳಗೆ
ಸಹಪಾಠಿ ನಾನಾಗಿ
ಹಾಜರಿಯ ನೀಡುವೆ

ಹಿಂಬಾಲಿಸಿ ನಾನಿನ್ನ ಓದುವೆನು
ಇನ್ನಾರಿಗಂತೂ ಹೇಳದಿರೋ
ಕಥೆಯೊಂದ ಹೇಳುವೆ

ನೀನೇ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೇ
ಜೋಪಾನ ಮಾಡಿಕೊ
ಸಹಪಾಠಿಯೇ
ಸಹಪಾಠಿಯೇ

ಮುದ್ದಾದ ಗುಬ್ಬಿ ಮಾತನು
ದಿನ ಆಲಿಸೋ
ಗೂಡಂತೆ ನೀನಿರು
ನನ್ನ ಜೀವದ ಪುಸ್ತಕದಲಿರೋ
ನವಿಲಿನ ಗರಿಯೇ ನೀನು
ಬಳಿ ಬಂದರೆ ದೋಣಿ ಆಟವ ನಿನಗಾಗಿ
ನಾ ಕಲಿಸುವೆ

ಹಿಂಬಾಲಿಸಿ ನಾನಿನ್ನ ಬರೆಯುವೆನು
ಇನ್ನಾರಿಗಂತೂ ಕಾಣದಿರೋ
ಪುಟವೊಂದ ತೆರೆಯುವೆ

ನೀನೇ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೇ
ಜೋಪಾನ ಮಾಡಿಕೊ
ಸಹಪಾಠಿಯೇ

ಆಚಂದಮಾಮ ದೋಸ್ತಿಯೇ
ನಿನ ಸಂಘ ಸೇರಲು
ರಜೆಗಿಂತಲೂ ಖುಷಿ ನೀಡುವ
ವಿಷಯವೇ ನಿನ್ನ ನಗುವು
ಆ ನಗುವಲೇ ದಿನವ ಕಳೆಯುವ
ನನಗಂತು ಬಿಗುಮಾನವೇ

ಹಿಂಬಾಲಿಸಿ ನಾನಿನ್ನ ಸೇರುವೆನು
ಇನ್ನಾರಿಗಂತೂ ಹಾಡದಿರೋ
ಹಾಡೊಂದ ಹಾಡುವೆ

ನೀನೇ ನನ್ನ ಪಾಠವು
ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೇ
ಜೋಪಾನ ಮಾಡಿಕೊ
ಸಹಪಾಠಿಯೇ



Credits
Writer(s): Nobin Paul
Lyrics powered by www.musixmatch.com

Link