Ullasada Hoomale

ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ
ಸಂಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿ
ಮುಂಜಾನೆಯೂ ನೀ, ಮುಸ್ಸಂಜೆಯೂ ನೀ
ನನ್ನೆದೆಯ ಬಡಿತವು ನೀ
ಹೃದಯದಲ್ಲಿ ಬೆರೆತವ ನೀ
ಮೊದಮೊದಲು ನನ್ನೊಳಗೆ ಉದಯಿಸಿದ ಆ ಆಸೆಯೂ ನೀ
ನನ್ನವನೇ ಎಂದಿಗೂ ನೀ
ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ

ಮಾತಿಲ್ಲದೇ, ಕಥೆಯಿಲ್ಲದೇ ದಿನವೆಲ್ಲ ಮೌನವಾದೆ
ನಾ ಕಳೆದು ಹೋದೆನು, ಹುಡುಕಾಡಿ ಸೋತೆನು
ಹಸಿವಿಲ್ಲದೇ, ನಿಬಿರಿಲ್ಲದೇ ದಣಿವಾಗಲೂ ಇಲ್ಲ
ನನ್ನೊಳಗೆ ನೀನಿರೇ ನನಗೇನು ಬೇಡವು
ನನ್ ಪಾಠವು ನೀ, ನನ್ ಊಟವು ನೀ
ನಾ ಬರೆವ ಲೇಖನಿ ನೀ
ನಾ ಉಡುವ ಉಡುಗೆಯೂ ನೀ

ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ

(ಸನಿಸನಿಸ, ಸನಿಸನಿಸ
ಸನಿಸನಿಸ, ಸನಿಸನಿಸ
ಸನಿಸನಿಸ, ಸನಿಸನಿಸ
ಸನಿಸನಿಸ, ಸನಿಸನಿಸ
ಸನಿಸನಿಸ, ಸನಿಸನಿಸ
ಸನಿಸನಿಸ, ಪಮಪಮಪ
ಪಮಪಮಪ)

ನನ್ನ ಸ್ನಾನದ ನೀರಲ್ಲಿಯೂ ಬೆರೆತಿದ್ದ ಚೆಲುವ ನೀನು
ಕನ್ನಡಿಯ ನೋಡಿದೆ, ನನ್ನೊಡನೆ ಕಾಡಿದೆ
ನಾ ಹಚ್ಚುವ ಕಾಡಿಗೆಯಲಿ ಅವಿತಿದ್ದ ಚೋರ ನೀನು
ನಾನಿಟ್ಟ ಕುಂಕುಮದಿ ಪಳಪಳನೆ ಹೊಳೆಯುವೆ ನೀ
ನಾ ಮುಡಿದ ಮಲ್ಲಿಗೆಗೆ
ಪರಿಮಳ ನೀ, ಒಡೆಯನು ನೀ
ನಾ ಮಲಗೋ ಹಾಸಿಗೆ ನೀ

ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ
ಸಂಕೋಚದ ಹೊನ್ನೊಳೆ ಹರಿಯುತಿದೆ ಕಣ್ಣಲಿ
ಮುಂಜಾನೆಯೂ ನೀ, ಮುಸ್ಸಂಜೆಯೂ ನೀ
ನನ್ನೆದೆಯ ಬಡಿತವು ನೀ
ಹೃದಯದಲ್ಲಿ ಬೆರೆತವ ನೀ
ಮೊದಮೊದಲು ನನ್ನೊಳಗೆ
ಉದಯಿಸಿದ ಆಸೆಯೂ ನೀ
ನನ್ನವನೇ ಎಂದಿಗೂ ನೀ
ಉಲ್ಲಾಸದ ಹೂಮಳೆ ಜಿನುಗುತಿದೆ ನನ್ನಲಿ



Credits
Writer(s): Mano Murthy, Narayan S
Lyrics powered by www.musixmatch.com

Link