Andagathi

(ಸರಿಗಾಗಮರಿಸ ಸರಿಮಪನಿಪಾಮಗರಿ
ಸರಿಗಾಗಮರಿಸ ಸರಿಮಪನಿಪಾಮಗರಿ)

ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲು ವಯ್ಯಾರಾ

ಸೂರ್ಯಕಾಂತಿ ಕೆನ್ನೆ ತುಂಬಾ ಬಣ್ಣ ಬಣ್ಣ ಚಿತ್ತಾರ

ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲು ವಯ್ಯಾರಾ
ಸೂರ್ಯಕಾಂತಿ ಕೆನ್ನೆ ತುಂಬಾ ಬಣ್ಣ ಬಣ್ಣ ಚಿತ್ತಾರ
ನಡಿಗೆ ತುಂಬಾ ನಾಗಿಣಿ ಶೃಂಗಾರ
ನಗುವಿನಾ ತುಂಬಾ ಹುಣ್ಣಿಮೆ ಸಿಂಧೂರ
ನಿನ್ನ ತುಂಬಿಕೂಂಡ ನನ್ನ ಎದೆಯಲ್ಲಿ ಝೇಂಕಾರ

ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲು ವಯ್ಯಾರಾ
ಸೂರ್ಯಕಾಂತಿ ಕೆನ್ನೆ ತುಂಬಾ ಬಣ್ಣ ಬಣ್ಣ ಚಿತ್ತಾರ

(ಸಮಾಗಮಗಮಗಮ ರಿಗರಿಗರಿಗರಿಗ ಸಾರಿಸಾನಿಸ
ಸಸಸಮಾಗಮಗಮಗಮ ಗಮನಿಪ ಮಗರಿಗ ಸಾರಿಸಾನಿಸ)

ಪೂರ್ಣಚಂದ್ರ ಎದೆಯಿಂದಾ ಬೆಳ್ಳಿ ತುಣುಕು ಚೆದುರಿತು
ಅಂದವಾದ ಬೊಂಬೆಯೊಂದು ಅದ್ದರಿಂದ ಮೂಡಿತ್ತು
ಅಮರ ಶಿಲ್ಪಿ ಜಕ್ಕಣ್ಣಾ ಇವಳ ನೋಡಿ ಬೆರಗಾದ
ಕುಂಚರಾಜ ರವಿವರ್ಮಾ ಮರೆತು ಶರಣಾದ
ಮಿಂಚು ಮಿಂಚುವಾ ಸಿಂಚರವೇ ಮಿಡಿಯುವ ಹೃದಯಕ್ಕೆ ಕಂಪನವೇ
ಭಾವನೆ ಅಲೆಗಳಾ ಇಂಚರವೇ ಚಂದದ ಚೆಲುವಿನ ಆಗರವೇ
ಕೋಟಿ ತಾರೆ ಒಟ್ಟಿಗೆ ಸೇರಿ ವೇದ ಮಂತ್ರವಾ ಘೋಷವ ಸಾರಿ
ಜೀವ ತುಂಬಿ ತಂದರು ನಿನ್ನಾ ಪ್ರೀತಿಸಲು ನನ್ನಾ

ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲು ವಯ್ಯಾರಾ
ಸೂರ್ಯಕಾಂತಿ ಕೆನ್ನೆ ತುಂಬಾ ಬಣ್ಣ ಬಣ್ಣ ಚಿತ್ತಾರ

ಮೇಘದೂತ ಕಾವ್ಯದಲಿ ಶಾಲುಂತಲೆ ಪುಟಗಳಲಿ
ಕಾಳಿದಾಸ ಮರೆತು ಹೋದ ಪದವೂಂದು ನಿನ್ನೆನಾ
ಇಂದ್ರಲೋಕ ವೈಭವದಿ
ಕೋಟಿ ಸುಖದ ಸ್ವಪ್ನದಲಿ
ಕೊರೆತೆಯೊಂದು ಬಂತು ಅದು ನೀನೇನಾ ನೀನೇನಾ
ಪದಗಳೇ ನಾಚುವ ಕವನವು ನೀ
ಕವಿಗಳಿಗೆಟುಕದಾ ಕಲ್ಪನೆ ನೀ
ಕುಂಚವೇ ನಾಚುವ ಚಿತ್ರವು ನೀ
ಬಣ್ಣಗಳಿಲ್ಲದೆ ಮಿನುಗುವೆ ನನೀ
ಏನ ಹೇಳಿ ಹೂಗಳಲಿ ನಿನ್ನಾ
ಮಾತುಗಳೇ ಮುಗಿದವು ಚಿನ್ನಾ
ಮೌನವಾಗಿ ನಿಂತರೂ ನಿನ್ನ ಅಂದವು ಕಾಡುತಿದೆ

ಅಂದಗಾತಿ ಕಣ್ಣಾ ತುಂಬಾ ಚೆಲ್ಲಿ ಚೆಲ್ಲು ವಯ್ಯಾರಾ
ಸೂರ್ಯಕಾಂತಿ ಕೆನ್ನೆ ತುಂಬಾ ಬಣ್ಣ ಬಣ್ಣ ಚಿತ್ತಾರ
ನಡಿಗೆ ತುಂಬಾ ನಾಗಿಣಿ ಶೃಂಗಾರ
ನಗುವಿನಾ ತುಂಬಾ ಹುಣ್ಣಿಮೆ ಸಿಂಧೂರ
ನಿನ್ನ ತುಂಬಿಕೂಂಡ ನನ್ನ ಎದೆಯಲ್ಲಿ ಝೇಂಕಾರ

Credits
Writer(s): Narayan S, Rajkumar S. A
Lyrics powered by www.musixmatch.com

Link