Vasanti Vasanti

ವಾಸಂತಿ ವಾಸಂತಿ ನನ್ನೆದೆ ತೋಟಕೆ
ಬರ್ತೀಯಾ?
ಓ ಬರ್ತೀಯಾ?
ಜೀವ ನಿಂಗೆ ಕೊಡ್ತಿನಿ ಪ್ರೀತಿಯ ಚೆಲ್ಲುತ
ಇರ್ತಿಯಾ?
ಎದೆಯಲಿ ಇರ್ತಿಯಾ?

ನಿನ್ನ ಪ್ರೀತಿ ಕದಿಯೋಕೆ ಹುಟ್ಟಿ ಬಂದೆ ನಾ
ಜನ್ಮ ಜನ್ಮ ಹೀಗೇನೆ ಬಿಟ್ಟು ಹೋಗೆ ನಾ

ಒಪ್ಪಿದೆ ಒಪ್ಪಿದೆ
ಮಾತಿಗೆ ಒಪ್ಪಿದೆ
ಅಪ್ಪಿದೆ ಅಪ್ಪಿದೆ
ಹೃದಯವ ಅಪ್ಪಿದೆ

ವಾಸಂತಿ ವಾಸಂತಿ ನನ್ನೆದೆ ತೋಟಕೆ
ಬರ್ತೀಯಾ?
ಓ ಬರ್ತೀಯಾ?

ಸುಂಟರಗಾಳಿ
ಹದಿನೆಂಟರ ಪೋರಿ
ತಂಬೆಲೆರ ತಂಪಿನಲಿ ಏತಕೆ ಬೆವರುತಿಯಾ?
ಓ ಆಸೆಯನ್ನೆಲ್ಲ
ನನ್ನಾಸೆಯನ್ನೆಲ್ಲಾ
ನಾಚಿಕೆಯು ತಡೆಯುತಿದೆ ಏತಕೆ ಕಾಡ್ತಿಯಾ?
ಅಯ್ಯೋ ತಿಳಿದೋಯ್ತು
ನಿನ್ನಾಸೆ ಬಯಲಾಯ್ತು
ಜಾಣ ಸರಿಹೋಯ್ತು
ನನಗೀಗ ಖುಷಿಯಾಯ್ತು
ಇಷ್ಟವೇ ಇಷ್ಟವೇ ನಂಗೆ ನೀನಿಷ್ಟವೇ
ಇಷ್ಟವೇ ಇಷ್ಟವೇ ಎಲ್ಲವೂ ಇಷ್ಟವೇ

ವಾಸಂತಿ ವಾಸಂತಿ ನನ್ನೆದೆ ತೋಟಕೆ
ಬರ್ತೀಯಾ?
ಓ ಬರ್ತೀಯಾ?

ತುಂಟರತುಂಟ
ನನ್ನೊಲವಿನ ನೆಂಟ
ನನ್ನೆದೆಗೆ ಚೆಲ್ಲಿರುವೆ ಕನಸಿನ ಓಕುಳಿಯಾ
ಕಿಲ ಕಿಲ ವಾಣಿ
ಮನ ಪುಳಕಿಸೋ ರಾಣಿ
ನನ್ನೆದೆಯ ಸೀಳಿರುವೆ ಕಚಗುಳಿ ಇಟ್ಟಿರುವೆ
ಪಾಪ ನೀನಲ್ವ
ನಿಂಗೇನೂ ಗೊತ್ತಿಲ್ವ
ಇನ್ನೂ ಮುಗಿದಿಲ್ವಾ
ನಿನ್ಕಾಟ ತಪ್ಪೋಲ್ವ
ಸಂಗಮ ಸಂಗಮ ಸರಳವೇ ಸಂಗಮ
ಸಂಭ್ರಮ ಸಂಭ್ರಮ ಸಕಲವೂ ಸಂಭ್ರಮ

ವಾಸಂತಿ ವಾಸಂತಿ ನನ್ನೆದೆ ತೋಟಕೆ
ಬರ್ತೀಯಾ?
ಓ ಬರ್ತೀಯಾ?
ಜೀವ ನಿಂಗೆ ಕೊಡ್ತಿನಿ ಪ್ರೀತಿಯ ಚೆಲ್ಲುತ
ಇರ್ತಿಯಾ?
ಎದೆಯಲಿ ಇರ್ತಿಯಾ?

ನಿನ್ನ ಪ್ರೀತಿ ಕದಿಯೋಕೆ ಹುಟ್ಟಿ ಬಂದೆ ನಾ
ಜನ್ಮ ಜನ್ಮ ಹೀಗೇನೆ ಬಿಟ್ಟು ಹೋಗೆ ನಾ

ಒಪ್ಪಿದೆ ಒಪ್ಪಿದೆ
ಮಾತಿಗೆ ಒಪ್ಪಿದೆ
ಅಪ್ಪಿದೆ ಅಪ್ಪಿದೆ
ಹೃದಯವ ಅಪ್ಪಿದೆ



Credits
Writer(s): S. Narayan, S.a. Rajkumar
Lyrics powered by www.musixmatch.com

Link