Lokada Kalaji

ಹೇ, ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ

ಓ, ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ

ನೀ ಮಾಡೋದು ಘಳಿಗಿ ಸಂತಿ
ಮೇಲು ಮಾಳಗಿ ಕಟ್ಟಬೇಕಂತಿ
ಆನೆ ಅಂಬಾರಿ ಏರಬೇಕಂತಿ
ಮಣ್ಣಲ್ಲಿ ಇಳಿಯುದ ತಣ್ಣಗ ಮರತಿ

ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ

ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ

ಬದುಕು ಬಾಳೆವು ನಂದೇ ಅಂತಿ
ನಿಧಿ ಸೇರಿದಷ್ಟೂ ಸಾಲದು ಅಂತಿ
ಕದವ ತೆರೆದು ಕಡೆಯಾತ್ರೆಗ್ ನಡೆವಾಗ
ಒದಗದು ಯಾವುದು ಸುಮ್ಮನೆ ಅಳತಿ

ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ

ಓ, ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ

ನೆಲೆಯು ಗೋವಿಂದನ ಪಾದದೊಳೈತಿ
ಅಲಕೊಂಡು ಹುಡುಕಿದಿರಿನ್ನೆಲ್ಲೈತಿ
ಶಿಶುನಾಳುಧೀಶನ ದಯೆಯೊಳಗೈತಿ
ರಸಿಕನು ಹಾಡಿದ ಕವಿತೆಯೊಳೈತಿ

ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ

ಲೋಕದ ಕಾಳಜಿ ಮಾಡತೀನಂತಿ
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ



Credits
Writer(s): Raghu Dixit
Lyrics powered by www.musixmatch.com

Link