Nannase Mallige

ಓ, ಚಿಲಿಪಿಲಿಗಳ ಪದ ನುಡಿಸುವೆ ಗಿಳಿಗಳೆ ಕೇಳಿ

ಓ, ಜಿಗಿ ಜಿಗಿದೊಡುವ ಕುರಿಮರಿಗಳೆ ಜೊತೆಗೂಡಿ

ನನ್ನಾಸೇ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯು ಅವಳೇ ನಮ್ಮ
ಬಂಗಾರದಂಥ ಬೊಂಬೆಯು
ನನ್ನಾಸೇ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯು ಅವಳೇ ನಮ್ಮ
ಬಂಗಾರದಂತ ಬೊಂಬೆಯು

ಗಿರಿಜಾರೋ ಗಂಗೆಯೇ, ಮಲೆನಾಡ ತುಂಗೆಯೇ
ಕಾವೇರಿ ತಂಗಿಯೇ ವಯ್ಯಾರಿ ಭದ್ರಯೇ
ಎಲ್ಲ ಸೇರಿ ಅವಳ ಪಾದ ತುಂಬಿರಿ

ನನ್ನಾಸೇ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯು ಅವಳೇ ನಮ್ಮ
ಬಂಗಾರದಂಥ ಬೊಂಬೆಯು

(ಅಲ್ಕಣ್ಣ್ ಮಗ ನಿನ್ನ ತಂಗಿ ಇಟೊಂದು ಒದುಸ್ತಿಯಲ್ಲ ಅವಳಿಗೆ ಎಂತ ಗಂಡು ತರ್ತಿಯಪ್ಪ)

ಸುಟು ಬುಟು ವೀರನ ಜೋಡಿ ನೀಡುವೆ
ಅಂಬಾರಿ ಮೇಲೆ ಅವಳ ಮೆರವಣಿಗೆ ಮಾಡುವೆ

ಓ, ತೆಂಗು ಬಾಳೆ ಚಪ್ಪರ ಊರ ಬೀದಿಗೆ
ಕಂಸಾಳೆ ಡೊಳ್ಳು ತಾಳ ಓಲಗವ ತರಿಸುವೆ
ಅವಳ ಪಾದ ಭೂಮಿಗೆ ಸೊಕದಂತೆ ಕಾಯುವೆ
ನಡೆವದಾರಿಗೆಲ್ಲವು ಹೂವ ರಾಶಿ ಚೆಲ್ಲುವೇ
ನಗೆ ಚೆಲ್ಲೊ ನನ್ನ ಬಂಗಾರಿಗೆ

ನನ್ನಾಸೇ ಮಲ್ಲಿಗೆ ಬರುತಾಳಮ್ಮ
ನಮ್ಮೂರ ಜ್ಯೋತಿಯು ಅವಳೇ ನಮ್ಮ
ಬಂಗಾರದಂಥ ಬೊಂಬೆಯು

ತಾರೆಗಳ ತಂದು ನಾ ಕೂಡಿ ಹಾಕುವೆ
ಆ ಚಂದ್ರನನ್ನು ಇವಳ ಅಂಗೈಗೆ ನೀಡುವೆ

ಜೋಗುಳವ ಹಾಡುತ ತುತ್ತ ನೀಡುವೇ
ನಾ ಕೂಸಿನಂತೆ ಆಗ ಸಿಹಿಮುತ್ತ ಬೇಡುವೆ
ಕರುಳ ಗೆಳೆತಿಯಾದರು, ಇವಳೇ ನನಗೆ ತಾಯಿಯು
ಮಮತೆ ಬಳ್ಳಿಯಾದರು, ನನ್ನ ಉಸಿರ ದೇವಿಯು
ಬದುಕೇಲ್ಲ ನನ್ನ ಬಂಗಾರಿಗೇ

ನನ್ನಾಸೇ ಮಲ್ಲಿಗೆ ಬಂದಾಳಮ್ಮ
ನಮ್ಮೂರ ಜ್ಯೋತಿಯು ಇವಳೇ ನಮ್ಮ
ಬಂಗಾರದಂಥ ಬೊಂಬೆಯು

ಗಿರಿಜಾರೋ ಗಂಗೆಯೇ ಮಲೆನಾಡ ತುಂಗೆಯೇ
ಕಾವೇರಿ ತಂಗಿಯೇ ವಯ್ಯಾರಿ ಭದ್ರಯೇ
ಎಲ್ಲ ಸೇರಿ ಇವಳ ಪಾದ ತುಂಬಿರಿ

ನನ್ನಾಸೇ ಮಲ್ಲಿಗೆ ಬಂದಾಳಮ್ಮ
ನಮ್ಮೂರ ಜ್ಯೋತಿಯು ಇವಳೇ ನಮ್ಮ
ಬಂಗಾರದಂಥ ಬೊಂಬೆಯು



Credits
Writer(s): S. Narayan, L N Shastri
Lyrics powered by www.musixmatch.com

Link