O Mallige

ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ
ಸದಾ ಸದಾ ಸದಾ
ಈ ಕಂಗಳು ಮಂಜಾದರೆ, ನಾ ತಾಳೆನು
ಭಯ ಬಿಡು ಸದಾ
ನಿನ್ನಾ ನೋವು ನನಗಿರಲಿ
ನೆಮ್ಮದಿ ಸವಿ ನಿನಗಿರಲಿ
ಸದಾ ಕಾಯುವೆ

ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ
ಸದಾ ಸದಾ ಸದಾ

ಹೋದೋರೆಲ್ಲ ಒಳ್ಳೆಯವರು ಹರಸೋ ಹಿರಿಯರು
ಅವರ ಸವಿಯ ನೆನಪು ನಾವೇ ಉಳಿದ ಕಿರಿಯರು
ನಿನ್ನ ಕೂಡ ನೆರಳ ಹಾಗೆ
ಇರುವೆ ನಾನು ಎಂದು ಹೀಗೆ
ಒಂಟಿಯಲ್ಲ ನೀ

ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ
ಸದಾ ಸದಾ ಸದಾ

ನಾಳೆ ನಮ್ಮ ಮುಂದೆ ಇಹುದು ದಾರಿ ಕಾಯುತ
ದುಃಖ ನೋವು ಎಂದೂ ಜೊತೆಗೆ ಇರದು ಶಾಶ್ವತ
ಭರವಸೆಯ ಬೆಳ್ಳಿ ಬೆಳಕು ಹುಡುಕಿ ಮುಂದೆ ಸಾಗಬೇಕು, ಧೈರ್ಯ ತಾಳುತಾ

ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ
ಸದಾ ಸದಾ ಸದಾ
ನಿನ್ನಾ ನೋವು ನನಗಿರಲಿ
ನೆಮ್ಮದಿ ಸವಿ ನಿನಗಿರಲಿ
ಸದಾ ಕಾಯುವೆ
ಓ ಮಲ್ಲಿಗೆ, ನಿನ್ನೊಂದಿಗೆ ನಾನಿಲ್ಲವೇ
ಸದಾ ಸದಾ ಸದಾ



Credits
Writer(s): V. Manohar
Lyrics powered by www.musixmatch.com

Link