Ulidavaru Kandanthe Promotional Song (Version 2)

Yeah Rakshit start ma
ಎಲ್ರು ಆಡ್ತಾರೆ ಮನಸಿಗ್ ಬಂದಂತೆ
ನನ್ ಮಾತ್ ಎಲ್ ಕೇಳ್ತಾರೆ ಈ ಜನತೆ
ನಾನ್ ಬಿಟ್ ಬಿಟ್ಟಿದಿನಪ್ಪ ಬೇರೆಯವರ್ ಚಿಂತೆ
ಇವರಿಗೆಲ್ಲ ಜಗತ್ತೆ ಉಳಿದವರು ಕಂಡಂತೆ

ಹಾಡಂತೆ ಬರಿಯೊಲೇನು
ಕೇಳಿದೆನು ಆ ದೇವ್ರನ್ನು
ಹೇಳಿಕೊಟ್ಟ ನಿನಗನಿಸಿದ ಬಿಟ್ಟು
ಎಲ್ಲಾನು ಉಳಿದವರು ಕಂಡಂತೆ
ಹೀಡಿಗಾಯಿ ಹೊಡೆದಂತೆ
ನಮಾಝಲ್ಲಿ ಕರೆದಂತೆ
ಕೊಲೆರಡು ಕ್ಲೋಸಾದಂತೆ
ಉಳಿದವರು ಕಂಡಂತೆ

ಕಣ್ಣು ನಿನ್ನದಾದರೇನು
ನೋಡೋದು ಬೇರೆವ್ರನಲ್ಲವೇನು
ನೋಡೋದು ಬೇರೆವ್ರಾದರೇನು
ಅಲ್ಲಿ ಹುಡುಕು ನೀನು ನಿನ್ನ ತನವನ್ನು
ಡೀಸೆಲ್ ಗಾಡಿ ಪೆಟ್ರೋಲ್ ಅಲ್ಲಿ ಒಡಲ್ವಂತೆ
ಟ್ರೈ ಮಾಡಿ ನೋಡೋಕೆ ಇವರಿಗೇನ್ ಧಾಡಿ ಅಂತೇ
ಇಲ್ಲಿ ಎಲ್ಲ ಸ್ಟೋರಿಗಳು ಬರಿ ಅಂತೆ ಕಂತೆ
ಕೇಲ್ದ್ರೆ ಹೇಳ್ತಾರೆ
ಅಯ್ಯೋ ನಂಗ್ ಗೊತ್ತಿಲ್ಲಪ
ಎಲ್ಲ ಉಳಿದವರು ಕಂಡಂತೆ

ಕಣ್ಣು ನಿನ್ನದಾದರೇನು
ನೋಡೋದು ಬೇರೆವ್ರನಲ್ಲವೇನು
ನೋಡೋದು ಬೇರೆವ್ರಾದರೇನು
ಅಲ್ಲಿ ಹುಡುಕು ನೀನು ನಿನ್ನ ತನವನ್ನು

ದಾರಿ ಸುಮ್ನೆ ನಿಂತೈತೆ
ನಾವೇ ಮುಂದಕ್ ಹೋದಂತೆ
ಮುಂದೆ ಮುಂದೆ ನಾವು ಹೋದಂತೆ
ಹಿಂದಿನ್ ದಾರಿ ಯಾಕೋ ಕಳೆದೈತೆ
ದೇವ್ರು ಮುಂದೆ ಭಕ್ತ
ಭಕ್ತನ ಮುಂದೆ ದೇವ್ರು
ಇಬ್ಬರು ಸುಮ್ನಾವ್ರೆ
ಕಾರಣ ಸುಮ್ನಿರೋವ್ನು ದೇವ್ರೇ
ಪಂಚಭೂತ ಯಾರಂತೆ
ಗೊತ್ತಾಗೋದ್ ನಾವ್ ಸತ್ಮೇಲೆ ಅಂತೆ
ಸಾಯೋದು ನಾವು ಹೇಗ್ ಅಂತೆ
ನಮ್ ಬದುಕಿನ ಕೊನೆ ಲೈನು ಬರೆದಂತೆ

ಕಣ್ಣು ನಿನ್ನದಾದರೇನು
ನೋಡೋದು ಬೇರೆವ್ರನಲ್ಲವೇನು
ನೋಡೋದು ಬೇರೆವ್ರಾದರೇನು
ಅಲ್ಲಿ ಹುಡುಕು ನೀನು ನಿನ್ನ ತನವನ್ನು

ಹಾಡಂತೆ ಬರಿಯೊಲೇನು
ಕೇಳಿದೆನು ಆ ದೇವ್ರನ್ನು
ಹೇಳಿಕೊಟ್ಟ ನಿನಗನಿಸಿದ ಬಿಟ್ಟು
ಎಲ್ಲಾನು ಉಳಿದವರು ಕಂಡಂತೆ
ಹೀಡಿಗಾಯಿ ಹೊಡೆದಂತೆ
ನಮಾಝಲ್ಲಿ ಕರೆದಂತೆ
ಕೊಲೆರಡು ಕ್ಲೋಸಾದಂತೆ
ಉಳಿದವರು ಕಂಡಂತೆ



Credits
Writer(s): Yogaraj R Bhatt, B Ajaneesh Lokanath
Lyrics powered by www.musixmatch.com

Link