Hoo Manave

ಹೂ ಮನವೇ ಕಂಬನಿ ಏಕೆ?
ಹೃದಯ ಮರಳಿ ನಿನಗೆ ಕೊಡುವೆ
ಪ್ರೀತಿ ನಿಜವೋ ಏನೋ ಕಾಣೆ
ಪ್ರೀತಿ ಸಜವೋ ಹೇಳೇ ಜಾಣೆ

ಪ್ರೀತಿಯ ಮಾಡುವ ಪ್ರತಿ ಗಂಡಿಗೂ ಪ್ರತಿ ಹೆಣ್ಣಿಗೂ ದಿನಾ ಯಾತನೆ
ನಾಳೆಯ ನಂಬಲು, ನಿನ್ನೆ ನಂಬಲು ಅನ್ನೋ ಗೊಂದಲ ದಿನಾ ಯೋಚನೆ
ಎಲ್ಲಾ ಪ್ರೀತಿಯು ಜಂಜಾಟವೇ
ಬರಿ ಹೋರಾಟವೇ ಮನಸೇ
ಬಲಿಯಾಯಿತೇ ಪ್ರೇಮಾಗ್ನಿಯ ಅಗ್ನಿಕುಂಡಕೆ ಉಸಿರೇ
ಹೋಗದಿರೆ ಮನಸೇ
ಕಾರಣವ ತಿಳಿಸೆ
ಹೃದಯ ಮರಳಿ ನಿನಗೆ ಕೊಡುವೆ

ಹಾಡಲು ಸಾಧ್ಯವೇ ಶ್ರುತಿ ಮೀರಿದ ಲಯ ಇಲ್ಲದ ಎದೆ ಹಾಡನು
ದೂರಲು ಸಾಧ್ಯವೇ ಸತಿ ತುಂಬಿದ ಪ್ರತಿ ಬಿಂಬದ ಎದೆ ಗೂಡನು
ಇಂದೇನಾಯಿತೋ ಹೇಗಾಯಿತೋ ಒಡೆದೇ ಹೋಯಿತೋ ಹೃದಯ
ಕನಸೇನಾಯಿತು,ಕಳೆದೇ ಹೋಯಿತೋ ಕಣ್ಣೇ ಹೋಯಿತೋ ಸರಿಯಾ
ಭಾವಗಳ ಕಲಹ
ಕಾರಣವೇ ವಿರಹ

ಹೃದಯ ಮರಳಿ ನಿನಗೆ ಕೊಡುವೆ
ಪ್ರೀತಿ ನಿಜವೋ ಏನೋ ಕಾಣೆ
ಪ್ರೀತಿ ಸಜವೋ ಹೇಳೇ ಜಾಣೆ



Credits
Writer(s): Ellwyn Vijay, V Nagendra Kaviraj
Lyrics powered by www.musixmatch.com

Link