Neenaade Baalige

ನೀನಾದೆ ಬಾಳಿಗೆ ಜ್ಯೋತಿ, ನಾ ಕಂಡೆ ಕಾಣದ ಪ್ರೀತಿ
ನೀನಾದೆ ಬಾಳಿಗೆ ಜ್ಯೋತಿ, ನಾ ಕಂಡೆ ಕಾಣದ ಪ್ರೀತಿ
ಮನಸು ಹೂವಾಗಿ ಕನಸು ನೂರಾಗಿ
ಮನಸು ಹೂವಾಗಿ ಕನಸು ನೂರಾಗಿ
ಈ ಜೀವ ಬಾನಲ್ಲಿ ತೇಲಾಡಿದೆ
ಬಾ ಎನ್ನ ಬಾಳಿನ ಜ್ಯೋತಿ, ಬಾ ನನ್ನ ಪ್ರೇಮದ ಕಾಂತಿ
ಬಾ ಎನ್ನ ಬಾಳಿನ ಜ್ಯೋತಿ, ಬಾ ನನ್ನ ಪ್ರೇಮದ ಕಾಂತಿ
ಮನಸು ಹೂವಾಗಿ ಕನಸು ನೂರಾಗಿ
ಮನಸು ಹೂವಾಗಿ ಕನಸು ನೂರಾಗಿ
ಈ ಜೀವ ಬಾನಲ್ಲಿ ತೇಲಾಡಿದೆ

ರವಿ ಮೂಡಿ ಆಗಸದಲ್ಲಿ, ಬೆಳಕನ್ನು ಚೆಲ್ಲಿದ ಹಾಗೆ
ಇರುಳಾದ ಬಾಳಲಿ ಬಂದೆ, ಸಂತೋಷ ಸಂಭ್ರಮ ತಂದೆ
ಈ ಜೀವವು ನಲಿದಾಡಿದೇ
ಈ ಜೀವವು ನಲಿದಾಡಿದೇ
ಇನ್ನು ಎಂದೆಂದು ನೋವು ನಿನಗಿಲ್ಲ
ಇನ್ನು ಎಂದೆಂದು ನೋವು ನಿನಗಿಲ್ಲ
ಬಿಸಿಲಲ್ಲಿ ನೆರಳಾಗಿ ಹಿತ ನೀಡುವೇ

ನೀನಾದೆ ಬಾಳಿಗೆ ಜ್ಯೋತಿ
ಬಾ ನನ್ನ ಪ್ರೇಮದ ಕಾಂತಿ

ಹೊಸ ರಾಗ ಹಾಡಲು ನೀನು, ಹೊಸ ಲೋಕ ಕಂಡೆನು ನಾನು
ಹೊಸ ದಾರಿ ನೋಡಿದೆ ಏನು, ಜೊತೆಯಾಗಿ ಬರುವೆಯ ಇನ್ನೂ
ನನ್ನಾಸೆಯಾ ಪೂರೈಸೆಯಾ
ನನ್ನಾಸೆಯಾ ಪೂರೈಸೆಯಾ
ನಿನ್ನ ಹುಸಿರಾಗಿ, ಬಾಳ ಹಸಿರಾಗಿ
ನಿನ್ನ ಹುಸಿರಾಗಿ, ಬಾಳ ಹಸಿರಾಗಿ
ಎಂದೆಂದು ಒಂದಾಗಿ ನಾ ಬಾಳುವೇ

ಬಾ ಎನ್ನ ಬಾಳಿನ ಜ್ಯೋತಿ
ನಾ ಕಂಡೆ ಕಾಣದ ಪ್ರೀತಿ
ಮನಸು ಹೂವಾಗಿ ಕನಸು ನೂರಾಗಿ
ಮನಸು ಹೂವಾಗಿ ಕನಸು ನೂರಾಗಿ
ಈ ಜೀವ ಬಾನಲ್ಲಿ ತೇಲಾಡಿದೆ



Credits
Writer(s): Chi Udayashanker, M Ranga Rao
Lyrics powered by www.musixmatch.com

Link