Munde Nee Hodaga (Male Version)

ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಚಿನ್ನ ನಾರಿಮಣಿ ಚಿಂತಾಮಣಿ ಕಟ್ಟುವೆ ನಾ ಕರಿಮಣಿ
ಮನಸ್ಸಲಿ ಚಿಂತೆ ಮಾಡಬೇಡಮ್ಮ
ಇಂತ ಜೋಡಿ ಈ ಊರಲ್ಲೇ ಇಲ್ಲಮ್ಮ
ಏನಿದು ಗೌರಮ್ಮ ಕಣ್ಣಲ್ಲಿ ಕಾಡಿಗೆ
ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ

ರೇಷಿಮೆ ಸೀರೆ ಉಟ್ಟು ಕೈ ತುಂಬ ನೆರಿಗೆಯಿಟ್ಟು
ರೇಷಿಮೆ ಸೀರೆ ಉಟ್ಟು ಕೈ ತುಂಬ ನೆರಿಗೆಯಿಟ್ಟು
ನಡುವಲ್ಲಿ ಸಿಕ್ಕಿಸುವೆ ಜಯಮ್ಮ
ಅದು ನೆರಿಗೆಯಲ್ಲ ನನ ಮನಸ್ಸು ಕೇಳಮ್ಮ
ಏನಿದು ಗೌರಮ್ಮ ಕಣ್ಣಲ್ಲಿ ಕಾಡಿಗೆ
ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ

ಮಳೆಯಲಿ ನೆಂದಾಗ ಮರದಡಿಯಲಿ ನಿಂತಾಗ
ಮಳೆಯಲಿ ನೆಂದಾಗ ಮರದಡಿಯಲಿ ನಿಂತಾಗ
ಹಿತವಾಗಿ ನಡುಗುವೆಯಾ ಗಂಗಮ್ಮ
ಅದು ನಡುಕವಲ್ಲ ಮೈ ಮಿಂಚು ಕೇಳಮ್ಮ
ಏನಿದು ಗೌರಮ್ಮ ಕಣ್ಣಲ್ಲಿ ಕಾಡಿಗೆ
ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ

ಕತ್ತಲೆಯು ಬಂದಾಗ ಮೆತ್ತೆಯಲಿ ಇರುವಾಗ
ಕತ್ತಲೆಯು ಬಂದಾಗ ಮೆತ್ತೆಯಲಿ ಇರುವಾಗ
ದಿಂಬನ್ನು ಅಪ್ಪುವೆಯಾ ಹೊನ್ನಮ್ಮ
ಅದು ದಿಂಬಲ್ಲ ನನ್ನ ಮೈ ಕೇಳಮ್ಮ

ಏನಿದು, ಹೋಯಿ ಹೋಯಿ
ಏನಿದು ಗೌರಮ್ಮ ಕಣ್ಣಲ್ಲಿ ಕಾಡಿಗೆ
ಯಾರು ಹಚ್ಚಿದ ಕಾಡಿಗೆ ನಾನು ಹಚ್ಚಿದ ಕಾಡಿಗೆ
ಮುಂದೆ ನೀ ಹೋದಾಗ ಹಿಂದೆ ನಾ ಬರುವೆ
ಹಿಂದೆ ನಾ ಬರುವೆ ಮುಂದೆ ನೀ ಹೋದಾಗ



Credits
Writer(s): Ganesh, Chi Udayashanker, Shankar
Lyrics powered by www.musixmatch.com

Link