Poorva Janmadali Naa Maadida

ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ

ಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯ ಹರಿ ವಾರಿಜ ನಾಭ ಶ್ರೀ ಕೃಷ್ಣ

ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ
ದಟ್ಟ ದಾರಿದ್ರ್ಯ ವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ
ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆ ಕಷ್ಟ ಪಡುತಿಹೆನಯ್ಯ ಕೃಷ್ಣಾ
ದಟ್ಟ ದಾರಿದ್ರ್ಯವನು ಪರಿಹರಿಸದಿರೆ ದೂರು ತಟ್ಟುವುದು ನಿನಗಯ್ಯ ಕೃಷ್ಣ
ಕಾಸಿನ ಆಸೆಯನು ಮಾಡಿ ಬಹುದಿನದಿಂದ ಆಯಾಸದೊಳಗಿಹೆನು ಕೃಷ್ಣ
ಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ
ಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸು ಸಾಸಿರ ನಾಮದ ಶ್ರೀ ಕೃಷ್ಣ

ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ

ಮುಟ್ಟಲಂಜುವರು ಬಂದುಗಳು ಕಂಡರೆ ಎನ್ನ ಅಟ್ಟಿಕೊಳುತಿಹರಯ್ಯ ಕೃಷ್ಣ
ತೊಟ್ಟಿಲ ಶಿಶು ಬಾಯ ಬಿಡುವತೆರೆದಂತೆ ಕಂಗೆಟ್ಟು ಶೋಕಿಸುವೆನು ಕೃಷ್ಣ

ತಂದೆ ತಾಯಿಯು ಇಲ್ಲ ಬಂಧು ಬಳಗವೂ ಇಲ್ಲ ಇಂದೆನಗೆ ಗತಿಯೇನು ಕೃಷ್ಣ

ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ
ಮಂದರಧರ ಶ್ರೀ ಪುರಂದರ ವಿಠ್ಠಲ ನೀ ಬಂದು ನೆಲೆಯಾಗಯ್ಯ ಕೃಷ್ಣ

ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ
ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂ ದುರ್ವಿಯೊಳು ಜನಿಸಿದೆನು ಕೃಷ್ಣ

ಕೃಷ್ಣಾ
ಕೃಷ್ಣಾ
ಕೃಷ್ಣಾ
ಕೃಷ್ಣಾ
ಕೃಷ್ಣಾ

Credits
Writer(s): Narasimha Nayak
Lyrics powered by www.musixmatch.com

Link