Marubhoomiyalli

ಮರುಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸ ಕಂಡೆ
ಈ ಮನಸಿನ ಭಾರಕ್ಕೆ ಹೂವಿನ ಹಗುರ ತಂದೆ
ಎಂದೂ ಕಾಣದ ಸವಿ ಕನಸೇ ನೀನಾ?
ಈ ಕತ್ತಲ ಕಣ್ಣಿಗೆ ನೀ ಆದೆ ಬೆಳಕಾ?
ನೀರು ಜೇನಾಯ್ತು ಹೇಗೋ ನಾನು ಅರಿಯೆ
ಹೀಗೆ just ಮಾತ್-ಮಾತಲ್ಲಿ

ಬಾನಲ್ಲಿ ಹಕ್ಕಿಯ ಮೀರಿ ಹಾರುವ ಆಸೆ ಕಂಡೆ
ತಂಪಾದ ಮಂಜಿನ ಹನಿಯ ಮುತ್ತಿಕ್ಕೋ ಆಸೆ ಕಂಡೆ
ಪಯಣಕ್ಕೆ ಸವಿಯ ಸ್ನೇಹ ಸಿಕ್ಕಿದೆ ಇಲ್ಲಿ
ತೂರಿದೆ ನನ್ನ ಹೃದಯ ಬಾನಿನಲ್ಲಿ
ಕಣ್ಣಿಗೆ ಹಚ್ಚಿದೆ ನೀ ಪ್ರೇಮದ ಬಣ್ಣ
ಹೀಗೆ just ಮಾತ್-ಮಾತಲ್ಲಿ

ನನ್ನ ಉಸಿರಿಗೆ ನೀ ಸ್ವರವೇ
ಆ ಸ್ವರಕೆ ನಿನ್ನ ಹೆಸರು ಪದವೇ
ನನ್ನ ಉಸಿರಿಗೆ ನೀ ಸ್ವರವೇ
ಆ ಸ್ವರಕೆ ನಿನ್ನ ಹೆಸರು ಪದವೇ

ಕೇಳಿದೆ, "ಕೋಗಿಲೆ, ಆ ಹಾಡು ಹಾಡಲೇ?"
ಒಪ್ಪಿಗೆ ನಿನ್ನ ಕೇಳಿದೆ
ಕೇಳಿದೆ, "ಕೋಗಿಲೆ, ಆ ಹಾಡು ಹಾಡಲೇ?"
ಒಪ್ಪಿಗೆ ನಿನ್ನ ಕೇಳಿದೆ, yeah

ಮರುಭೂಮಿಯಲ್ಲಿ ಹೂವು ಅರಳೋ ಹುಚ್ಚು ಕನಸ ಕಂಡೆ
ಈ ಮನಸಿನ ಭಾರಕ್ಕೆ ಹೂವಿನ ಹಗುರ ತಂದೆ
ಎಂದೂ ಕಾಣದ ಸವಿ ಕನಸೇ ನೀನಾ?
ಈ ಕತ್ತಲ ಕಣ್ಣಿಗೆ ನೀ ಆದೆ ಬೆಳಕಾ?
ನೀರು ಜೇನಾಯ್ತು ಹೇಗೋ ನಾನು ಅರಿಯೆ
ಹೀಗೆ just ಮಾತ್-ಮಾತಲ್ಲಿ



Credits
Writer(s): Raghu Dixit
Lyrics powered by www.musixmatch.com

Link