Hey Ram

ये रामजन्म भूमि है
अगर हम यहाँ शांति चाहते है
तो दावूद जैसा रावण को ख़तम करना होगा
मरने केलिए न मैं महात्मा गाँधी हूँ और न तू गोडसे
और ये ज़माना भी nineteen fourty seven का नहीं
AK fourty seven का है

ಹೇ ರಾಮ್ this is India
Deceased India (Deceased India)
ಹೇ ರಾಮ್ (ಹೇ ರಾಮ್)
This is India (This is India)
Deceased India

ಅಶಾಂತಿಯ ಜ್ವಾಲೆ
ಹತಾಶೆಯ ಲಾವಾ
ಆಕ್ರೋಶದ ಕೂಗು
ಅಜ್ಞಾನದ ರಾಢಿ
ಬಾರೋ ರಾಮ, ನೋಡೋ ರಾಮ ವಿಧಿಸು ನಮಗೆ ನೀತಿ ನೇಮ
ಹೇ ರಾಮ್
ಹೇ ರಾಮ್ (ಹೇ ರಾಮ್)

ಝಣ್ಝಣ ಝಣ ಹಣದ ಘಮದಲಿ ಮಾರ್ಮನಸಿದೆ ಬಡವರ ಅಳಲು
ಅಣು ವೇಗದ ಬಾಳ ತಾಳಕೆ ತಾನೂದಿದೆ ಕಲ್ಕಿ ಕೊಳಲು
ಹಿಂದೂ ಮುಸ್ಲಿಂ ಪಾರ್ಸಿ ಕ್ರೈಸ್ತ ಒಡೆದ ಮನಸುಗಳು
ಬೆರೆಯದ ಬೆಸೆಯದ ನದಿಗಳು
ಅಳಿಯದ ಉಳಿಯದ ಬೇರುಗಳು
ಸ್ವಾತಂತ್ರ್ಯವಿದ್ರೂ ಜೀತದ ಪಾಡು ನೋಡು ನೋಡು ಬಾ
ನಾಡಗೀತೆಯಲಿ ಭಿಕ್ಷುಕರ ಹಾಡು ಕೇಳು ಕೇಳು ಬಾ
ತಾರೋ ಪ್ರೇಮ

ಹೇ ರಾಮ್ (ಹೇ ರಾಮ್)
This is India (This is India)
Deceased India (Deceased India)

ಲಂಚಾವತಾರ
ಅರಾಜಕೀಯ
ಸ್ವದೇಶ ದ್ರೋಹ
ದಾರಿದ್ರ್ಯ ಪೀಡೆ
ಬಾರೋ ರಾಮ, ನೋಡೋ ರಾಮ ವಿಧಿಸು ನಮಗೆ ನೀತಿ ನೇಮ
ಹೇ ರಾಮ್ (ಹೇ ರಾಮ್)
ಹೇ ರಾಮ್ (ಹೇ ರಾಮ್)

ಈ ಬೆತ್ತಲೆ ರಾಜ್ಯದೊಳಗೆ ಮೈ ಮುಚ್ಚಿದವ ಚೋರನಾಗುವ
ಈ ಕತ್ತಲೆ ಕೂಪದೊಳಗೆ ಬೆಳಕನಿತ್ತವ ದ್ರೋಹಿಯಾಗುವ
ಅವನ ದೂಷಿಸಿ ಇವನ ದ್ವೇಷಿಸಿ ಫಲವೇ ಇಲ್ಲಿಲ್ಲ
ಎಲ್ಲರು ಎಲ್ಲರೂ ನರಿಗಳೇ
ಕನಸಿನ ಕಣಿವೆಯ ಕುರಿಗಳೇ
ಮಗದೊಮ್ಮೆ ನೀನು ಅವತಾರವೆತ್ತಿ ಧರೆಯ ದುಃಖ ನೀಗು
ನರನಾಗಿ ಬರದೇ ವನವಾಸ ಪಡೆದು ಪರಶುರಾಮನಾಗು
ಶಿಕ್ಷಿಸೋ
ರಕ್ಷಿಸೋ

ಹೇ ರಾಮ this is India
Deceased India
ಭಿಕಾರಿ ದೇಶ
ಸಮೃದ್ಧ ವೇಷ
ಸನಾತ ಧರ್ಮಿ
ಬಾಳೆಲ್ಲ ಘೋರ
ಬಾರೋ ರಾಮ ತಾರೋ ಪ್ರೇಮ ವಿಧಿಸು ನಮಗೆ ನೀತಿ ನೇಮ
ಹೇ ರಾಮ (ಹೇ ರಾಮ)



Credits
Writer(s): Hamsalekha
Lyrics powered by www.musixmatch.com

Link