Ahah E Bedurugombey (From "Gaalipata")

ಆಹಾ, ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಎಹೇ, ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ನೆನಪಿನ ಜಾತ್ರೆಯಲಿ ಅಲೆದು ನಾ, ಕನಸಿನ ಕನ್ನಡಿಯ ಕೊಳ್ಳಲೇ
ಹೇ, ನಿನ್ನಯ ದಾರಿಯಲಿ ಅನುದಿನ, ಹೃದಯದ ಅಂಗಡಿಯ ತೆರೆಯಲೇ
ಆಹಾ, ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಎಹೇ, ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ

ಕೆನ್ನೆಯ ಗುಳಿಯೆ ನಿನ್ನ ಕೀರುತಿಯೇ
ಮುಂಗೋಪವೇನು ನಿನ್ನ ಮೂಗುತಿಯೇ
ಸೂರ್ಯನ ಮುಖದಲ್ಲಿ ಮೀಸೆಯ ಬರೆಯುವೆಯಾ
ಚಂದ್ರನ ಕರೆದಿಲ್ಲಿ ದೋಸೆಯಾ ತಿನಿಸುವೆಯ
ಕುಂಟೋ ಬಿಲ್ಲೆಯಲಿ ಮನಸು ತಲುಪುವೆಯಾ
ಹೋ, ಕಳೆದು ಹೋಗಿರುವೆ ದಾರಿ ತಿಳಿಸುವೆಯ
ಆಹಾ, ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಎಹೇ, ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ

ಪ್ರೀತಿಗೆ ಯಾಕೆ ಈ ಉಪವಾಸ
ಯಾತಕ್ಕು ಇರಲಿ ನಿನ್ನ ಸಹವಾಸ
ಅಂಚೆಯ ಪೆಟ್ಟಿಗೆಗೆ ಹೃದಯವ ಹಾಕಿರುವೆ
ನೆನಪಿನ ಕೊಟ್ಟಿಗೆಗೆ ನಿನ್ನನ್ನೇ ನೂಕಿರುವೆ
ನಂಬಿ ಕೆಟ್ಟಿರುವೆ ಏನು ಪರಿಹಾರ
ನಿನಗೆ ಕಟ್ಟಿರುವೆ ಮನದ ಗಡಿಯಾರ
ಆಹಾ, ಈ ಬೆದರು ಬೊಂಬೆಗೆ ಜೀವ ಬಂದಿರುವ ಹಾಗಿದೆ
ಎಹೇ ಹೇ ಹೇ, ಹೆಚ್ಚೇನು ಹೇಳಲಿ ಹುಚ್ಚು ಹೆಚ್ಚಾಗಿ ಹೋಗಿದೆ
ನೆನಪಿನ ಜಾತ್ರೆಯಲಿ ಅಲೆದು ನಾ, ಕನಸಿನ ಕನ್ನಡಿಯ ಕೊಳ್ಳಲೇ
ಹೇ, ನಿನ್ನಯ ದಾರಿಯಲಿ ಅನುದಿನ, ಹೃದಯದ ಅಂಗಡಿಯ ತೆರೆಯಲೇ

Credits
Writer(s): V Nagendra Prasad
Lyrics powered by www.musixmatch.com

Link