Onde Ninna

ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲನಾಗೋಕೆ
ಒಂದೇ ನಿನ್ನ ಮಾತು ಸಾಕು ಮೂಖನಾಗೋಕೆ
ಹೇಳು ಏನು ನೀಡಬೇಕು ಮಾತಾನಾಡೋಕೆ
ಕಾಣದ ಒಂದು ಕಾಮನಬಿಲ್ಲು ಮೂಡಿದೆ ನನ್ನೆದುರಲ್ಲೂ
ಹೂವಿನ ಬಾಣ ನಾಟಿದೆಯೇನು? ಲೂಟಿಯಾಗಿ ಹೋದೆ ನಾನು
ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲನಾಗೋಕೆ

ಎಲ್ಲೆ ನೋಡಿದಲ್ಲೂ ನೀನೆ ಅಡಗಿ ಕೂತಂತೆ
ಹರಿದ ನೋಟಿನಂತೆ ನಾನೇ ತಿರುಗಿ ಬಂದಂತೆ
ಬಾರೇ ಬಿಡಿಸೋಣ ಕನಸುಗಳ ಕಂತೆ
ನನ್ನ ತುಂಬ ನೀನೆ ತಾಜಾ ಸುದ್ಧಿಯಾದಂತೆ
ನಿನ್ನ ಮುಂದೆ ಚಂದ್ರ ಕೂಡ ರದ್ದಿಯಾದಂತೆ
ಸುಂದರವಾದ ಸುಂಟರಗಾಳಿ ನಿನ್ನಯ ರೂಪವ ತಾಳಿ
ಮಿಂಚಿನ ದಾಳಿ ಮಾಡಿದೆಯೇನು? ಲೂಟಿಯಾಗಿ ಹೋದೆ ನಾನು

ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲನಾಗೋಕೆ

ನೀನು ಕೇಳಲೆಂದೇ ಕಾದ ಒಂದು ಪದವಾಗಿ
ನಿನ್ನ ಖಾಸ ಕೋಣೆಯಲ್ಲಿ ಸಣ್ಣ ಕದವಾಗಿ
ಇರಬೇಕು ನಾನು ನಿನ್ನ ಜೊತೆಯಾಗಿ
ಓದಲೆಂದೇ ನೀನು ಮಡಿಸಿ ಇಟ್ಟ ಪುಟವಾಗಿ
ಇನ್ನು ಚಂದ ಗೊಳಿಸುವಂತ ನಿನ್ನ ಹಠವಾಗಿ
ಕಣ್ಣಲಿ ಕಸವ ಬೀಳಿಸಿಕೊಂಡು ಊದಲು ಕರೆದರೆ ನಿನ್ನ
ನಿನ್ನದೇ ಬಿಂಬವ ನೋಡಲು ನೀನು, ಲೂಟಿಯಾಗಿ ಹೋದೆ ನಾನು

ಒಂದೇ ನಿನ್ನ ನೋಟ ಸಾಕು ಮಳ್ಳನಾಗೋಕೆ
ಹೇಳು ಏನು ಮಾಡಬೇಕು ನಲ್ಲನಾಗೋಕೆ
ಒಂದೇ ನಿನ್ನ ಮಾತು ಸಾಕು ಮೂಖನಾಗೋಕೆ
ಹೇಳು ಏನು ನೀಡಬೇಕು ಮಾತಾನಾಡೋಕೆ



Credits
Writer(s): Jayanth Kaikini, Manomurthy
Lyrics powered by www.musixmatch.com

Link