Yaare Yaare

ಯಾರೇ, ಯಾರೇ, ನೀನು ಯಾರೇ?
ಬಾನಿನಿಂದ ಬಂದ ತಾರೆ
ಮುದ್ದು ಮಾತಾಡುತ ಅಕ್ಕರೆ ತೋರಿದೆ
ಎಂದೂ ಜೊತೆ ನಿಲ್ಲುವ ಸೂಚನೆ ನೀಡಿದೆ
ನಾ ಕಂಡ ಕನಸೆಲ್ಲಾ ನನಸಾಗಿದೆ ಇಂದು
ಯಾರೇ, ಯಾರೇ, ನೀನು ಯಾರೇ? (ನೀನು ಯಾರೇ)
ಬಾನಿನಿಂದ ಬಂದ ತಾರೆ

ಮುಂಜಾನೆ ಮಂಜು ನೀ
ಮುಸ್ಸಂಜೆ ಪಂಜು ನೀ
ಇಂಪಾದ ರಾಗ ನೀ
ತಂಪಾದ ಭಾವ ನೀ
ಜೀವಂತ ಶಿಲೆಬಾಲೆ ನೀ
ಮೈ ಮರೆಸೋ ಮಳೆಬಿಲ್ಲು ನೀ
ಸಂತೋಷ ಸಲ್ಲಾಪ ಸಂಗೀತ ನೀ ತಾನೆ
ಉಲ್ಲಾಸ ಉತ್ಸಾಹ ಉತ್ತೇಜನ ನೀನೆ

ಯಾರೇ, ಯಾರೇ, ನೀನು ಯಾರೇ?
ಬಾನಿನಿಂದ ಬಂದ ತಾರೆ

ಮಿಂಚಂತೆ ನೀ ಬಂದೆ
ಸಂಚಲನ ನೀ ತಂದೆ
ನಿನ್ನಲ್ಲೇ ನಾನೀಗ
ತಲ್ಲೀನ ಆಗೋದೆ
ಈ ಪ್ರೀತಿ ಅವಕಾಶವ ಹಣೆಯಲ್ಲಿ ಬರೆದೋಳು ನೀ
ಬೇರೇನು ಬೇಕಿಲ್ಲ ಆಸೇನೇ ನಂಗಿಲ್ಲ
ನೀ ತೋರೋ ಈ ಪ್ರೀತಿ ಒಂದೇನೆ ಸಾಕಲ್ಲ

ಯಾರೇ, ಯಾರೇ, ನೀನು ಯಾರೇ?
ಬಾನಿನಿಂದ ಬಂದ ತಾರೆ



Credits
Writer(s): Ghouse Peer, S A Lokesh Kumar
Lyrics powered by www.musixmatch.com

Link