Omme Baaro

ಒಮ್ಮೆ ಬಾರೋ, ಒಮ್ಮೆ ಬಾರೋ
ಎಲ್ಲೇ ನೀನಿದ್ದರೂ
ಒಮ್ಮೆ ಬಾರೋ, ಒಮ್ಮೆ ಬಾರೋ
ಬೇಗ ಹೇಗಿದ್ದರೂ
ಸುರಿಮಳೆ ಸುರಿಯುವ ಸೂಚನೆ
ಶುರುವಾಗಿದೆ, ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ
ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

ಒಮ್ಮೆ ಬಾರೋ, ಒಮ್ಮೆ ಬಾರೋ
ಎಲ್ಲೇ ನೀನಿದ್ದರೂ
ಒಮ್ಮೆ ಬಾರೋ, ಒಮ್ಮೆ ಬಾರೋ
ಬೇಗ ಹೇಗಿದ್ದರೂ

ಬಲಗಣ್ಣು ಬಡಿದಾಗ ಬರಲಿಲ್ಲ ಯಾಕೆ ನೀನು?
ಎಡಗಾಲು ಎಡವಿದರೂ ಸುಳಿವಿಲ್ಲ ಎಲ್ಲಿ ನೀನು?
ಕೈ ತುತ್ತು ಜಾರಿದ ಕ್ಷಣ ರಂಗೋಲಿಯ ಬರೆದೆನು

ಸುರಿಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ
ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

ಒಮ್ಮೆ ಬಾರೋ, ಒಮ್ಮೆ ಬಾರೋ
ಎಲ್ಲೇ ನೀನಿದ್ದರೂ
ಒಮ್ಮೆ ಬಾರೋ, ಒಮ್ಮೆ ಬಾರೋ
ಬೇಗ ಹೇಗಿದ್ದರೂ

ಅದೇ ಹಾದಿ ತುಳಿವಾಗ ಎದೆ ತುಂಬ ನೂರು ನೋವು
ಇಳಿ ಸಂಜೆ ಕಳೆವಾಗ ಸುಳಿದಂತೆ ಇಲ್ಲೇ ಸಾವು
ಅಸು ನೀಗೋ ಮುನ್ನ ನಿನ್ನನ್ನು ತುಸು ನೋಡಲು ಕಾದಿಹೆನು

ಸುರಿಮಳೆ ಸುರಿಯುವ ಸೂಚನೆ
ಶುರುವಾಗಿದೆ ಶುರುವಾಗಿದೆ
ಜೊತೆಯಲಿ ನೆನೆಯಲು ನಲ್ಲನೆ
ಮನಸಾಗಿದೆ ಮಿಡುಕಾಡಿದೆ ಹುಡುಕಾಡಿದೆ

ಒಮ್ಮೆ ಬಾರೋ, ಒಮ್ಮೆ ಬಾರೋ
ಎಲ್ಲೇ ನೀನಿದ್ದರೂ
ಒಮ್ಮೆ ಬಾರೋ, ಒಮ್ಮೆ ಬಾರೋ
ಬೇಗ ಹೇಗಿದ್ದರೂ



Credits
Writer(s): Jassie Gift, Kaviraj Kaviraj
Lyrics powered by www.musixmatch.com

Link