Nijaana Naanena

ನಿಜನಾ ನಾನೇನಾ
ನಿನ್ನ ಜೊತೆ ಜೊತೆಯಾಗಿರುವೆ
ಇದೆಲ್ಲಾ ಪ್ರೇಮನಾ
ನನ್ನ ಮನಸ್ಸನು ಕೇಳಿರುವೆ
ನನ್ನ ಎದೆಯಲಿ ಯಾರೋ
ಕಚಗುಳಿ ಇಡುವ ಹಾಗೆ
ಬೆನ್ನ ಹಿಂದೆ ಯಾರೋ ನಿಂತು ನಿನ್ನೆಡೆ ದೂಡಿದ ಹಾಗೆ
ಅರೆ ಅರೆ ಅರೆ ಉಸಿರಲಿ ವೇಗ
ಎಂಥಾ ಹೊಸ ಹೊಸ ಸಿಹಿ ಸುಖ ಈಗ
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ
ಅರೆ ಅರೆ ಅರೆ ಉಸಿರಲಿ ವೇಗ
ಎಂಥಾ ಹೊಸ ಹೊಸ ಸಿಹಿ ಸುಖ ಈಗ
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ

ನಿಜನಾ ನಾನೇನಾ
ನಿನ್ನ ಜೊತೆ ಜೊತೆಯಾಗಿರುವೆ
ಇದೆಲ್ಲಾ ಪ್ರೇಮನಾ
ನನ್ನ ಮನಸ್ಸನು ಕೇಳಿರುವೆ

ಈ ವಯಸ್ಸಿಗೆ ದಿನ ದಿನ ಹೊಸ ವಸಂತ
ಈ ಮನಸ್ಸಿಗೆ ಪ್ರತಿಕ್ಷಣ ನೀನೆ ಪ್ರಪಂಚ
ಈ ಉಲ್ಲಾಸಕೆ ಉತ್ಸಾಹಕೆ ನೀನೇ ಮುಹೂರ್ತ
ಬುಗುರಿಯ ಹಾಗೆ ತಿರುಗುವ ಮನಸು
ನೆನಪಿಗೆ ಬಾರದ ಸಾವಿರ ಕನಸು
ಚೆಲುವಿನ ಚಿಲಿಪಿಲಿ ಎರಡು ಹೃದಯದಿ
ಸುಂದರ ಅನುಭವವೂ

ನಿಜನಾ ನಾನೇನಾ
ನಿನ್ನ ಜೊತೆ ಜೊತೆಯಾಗಿರುವೆ
ಇದೆಲ್ಲಾ ಪ್ರೇಮನಾ
ನನ್ನ ಮನಸ್ಸನು ಕೇಳಿರುವೆ

ಈ ಮನಸ್ಸಲಿ ಆಸೆ ಇತ್ತು ಗೊತ್ತೆ ಇರ್ಲಿಲ್ಲ
ಈ ವಯಸ್ಸಲಿ ಪ್ರೀತಿ ಬರೋ ಸುಳಿವೆ ಇರ್ಲಿಲ್ಲ
ನಾ ನಿನ್ನ ಕಾಣೊ ಮೊದಲು ನಂಗೆ ಏನು ತಿಳ್ದಿಲ್ಲ
ನನ್ನಲಿ ನಾನು ಕಳೆದೆ ಹೋದೆ
ನಿನ್ನಲಿ ಎಂದೊ ಬೆರೆತು ಹೋದೆ
ಒಲವಿನ ಚಿಲಿಪಿಲಿ ಎರಡು ಹೃದಯದಿ
ಸುಂದರ ಸುಖಮಯವೂ

ನಿಜನಾ ನಾನೇನಾ
ನಿನ್ನ ಜೊತೆ ಜೊತೆಯಾಗಿರುವೆ
ಇದೆಲ್ಲಾ ಪ್ರೇಮನಾ
ನನ್ನ ಮನಸ್ಸನು ಕೇಳಿರುವೆ
ನನ್ನ ಎದೆಯಲಿ ಯಾರೋ
ಕಚಗುಳಿ ಇಡುವ ಹಾಗೆ
ಬೆನ್ನ ಹಿಂದೆ ಯಾರೋ ನಿಂತು ನಿನ್ನೆಡೆ ದೂಡಿದ ಹಾಗೆ
ಅರೆ ಅರೆ ಅರೆ ಉಸಿರಲಿ ವೇಗ
ಎಂಥಾ ಹೊಸ ಹೊಸ ಸಿಹಿ ಸುಖ ಈಗ
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ
ಅರೆ ಅರೆ ಅರೆ ಉಸಿರಲಿ ವೇಗ
ಎಂಥಾ ಹೊಸ ಹೊಸ ಸಿಹಿ ಸುಖ ಈಗ
ನನ್ನ ಖುಷಿ ಒಂದು ಧುಮ್ಮಿಕ್ಕುವ ಜೋಗ



Credits
Writer(s): Narayan S, Vishal Lalit Jain
Lyrics powered by www.musixmatch.com

Link