Baninda Jaridantha

ಬಾನಿಂದ ಜಾರಿದಂತ ಚುಕ್ಕಿನಾ ಹೇಳು ನೀನು?
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು?

ಬಾನಿಂದ ಜಾರಿದಂತ ಚುಕ್ಕಿನಾ ಹೇಳು ನೀನು?
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು?
ಇರುಳಲ್ಲೂ ಬೆಳಕಲ್ಲೂ ನಿನ್ನ ಕಣ್ಣ ಕಾಂತಿಯಲ್ಲೇ
ಹಗಲಲ್ಲೂ ಇರುಳಲ್ಲೂ ನಿನ್ನ ರೆಪ್ಪೆ ಮುಚ್ಚೋ ವೇಳೆ
ನಿನ್ ಅಂದವನ್ನೇ ನಾನು ಕಣ್ಣ್ ತುಂಬಿಕೊಂಡೆನಲ್ಲೇ
ನಿನ್ ಅಂದವನ್ನೇ ನಾನು ಕಣ್ಣ್ ತುಂಬಿಕೊಂಡೆನಲ್ಲೇ

ಬಾನಿಂದ ಜಾರಿದಂತ ಚುಕ್ಕಿನಾ ಹೇಳು ನೀನು?
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು?

ಮುಗುಳುನಗೆ ಅದು ಜಾದೂ
ಬಳಕು ನಡೆ ಅದು ಜಾದೂ
ನುಡಿವ ಬಗೆ ಅದು ಜಾದೂ, ಅದರ ಸವಿ ಜಾದೂ
ಹುಸಿ ಮುನಿಸು ಅದು ಜಾದೂ
ಹದಿ ವಯಸು ಅದು ಜಾದೂ
ನಿನ್ನ ಸೊಗಸು ಅದು ಜಾದೂ, ನೀನೇನೇ ಜಾದೂ
ತುಸು ಜಂಬ ನಿನ್ನ ಮೈತುಂಬ
ಅದು ತಪ್ಪು ಅಲ್ಲ, ಸರಿ, ರಂಭ
ಆಹಾ, ಅಂತದಮ್ಮ ನಿನ್ನ ಅಂದ, ಸರಿಸಾಟಿ ಇಲ್ಲದಿರೋ ಚಂದ
ಈ ಕಣ್ಣ ಪುಣ್ಯವೇನೋ, ನಿನ್ನನ್ನು ನೋಡೋ ಭಾಗ್ಯ
ಈ ಕಣ್ಣ ಪುಣ್ಯವೇನೋ, ನಿನ್ನನ್ನು ನೋಡೋ ಭಾಗ್ಯ

ಬಾನಿಂದ ಜಾರಿದಂತ ಚುಕ್ಕಿನಾ ಹೇಳು ನೀನು?
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು?

ನಳನಳಿಸೋ ಲತೆ ನೀನು
ಥಳಥಳಿಸೋ ಕಥೆ ನೀನು
ಘಮಘಮಿಸೋ ಸುಮ ನೀನು, ಬಂಗಾರದ ಮೀನು
ಜಿಗಿಜಿಗಿಯೋ ಝರಿ ನೀನು
ಜಗಮಗಿಸೋ ಸಿರಿ ನೀನು
ನಗುನಗುತ ಇರು ನೀನು ಎಂದೆಂದೂ ಇನ್ನು

ಎಳೆ ದಂತ-ದಂತ ಮೈಬಣ್ಣ
ಬಳುಕಾಡುವಂತ ನಡುಸನ್ನ
ನಸು ನಾಚುವಂತ ಪರಿ ಚೆನ್ನ
ಸಿರಿ ಗಂಧದಂತ ಕಂಪನ್ನ
ಹೀರುತ್ತಾ ನಾನು ಹಾಗೆ ಬಾನಲ್ಲಿ ತೇಲಿ ಹೋದೆ
ಹೀರುತ್ತಾ ನಾನು ಹಾಗೆ ಬಾನಲ್ಲಿ ತೇಲಿ ಹೋದೆ

ಬಾನಿಂದ ಜಾರಿದಂತ ಚುಕ್ಕಿನಾ ಹೇಳು ನೀನು?
ಆ ಚಂದ್ರ ಚೆಲ್ಲಿದಂತ ಬೆಳದಿಂಗಳೇನು ನೀನು?
ಇರುಳಲ್ಲೂ ಬೆಳಕಲ್ಲೂ ನಿನ್ನ ಕಣ್ಣ ಕಾಂತಿಯಲ್ಲೇ
ಹಗಲಲ್ಲೂ ಇರುಳಲ್ಲೂ ನಿನ್ನ ರೆಪ್ಪೆ ಮುಚ್ಚೋ ವೇಳೆ
ನಿನ್ ಅಂದವನ್ನೇ ನಾನು ಕಣ್ಣ್ ತುಂಬಿಕೊಂಡೆನಲ್ಲೇ
ನಿನ್ ಅಂದವನ್ನೇ ನಾನು ಕಣ್ಣ್ ತುಂಬಿಕೊಂಡೆನಲ್ಲೇ



Credits
Writer(s): S.a. Rajkumar, Kaviraj Kelnarase Hariyappa
Lyrics powered by www.musixmatch.com

Link