Chalisuva Cheluvey

ಚಲಿಸುವಾ ಚೆಲುವೇ
ಒಲಿಸಲೂ ಬರುವೇ
ನಾ ಹೇಳಲೇಬೇಕು ಎಂದ ವಿಷಯವೇ ಮರತೇ ಹೋಯ್ತಲ್ಲ ನಿನ್ಮುಂದೆ, ಚೆಲುವೇ
ನಾ ತೋರಿಸಲೆಂದೇ ತಂದ ಹೃದಯವೇ ಹೊರಟೇ ಹೋಯ್ತಲ್ಲ ನಿನ್ಹಿಂದೆ, ಚೆಲುವೇ
ಬಿರಿವ ಬೆಳಕಿನ ಹೂವಂತೆ, ನೀ ಹುಡುಗಿ
ಚಂದದ ನೋವಂತೆ, ನೀ ಬೆಡಗಿ
ಕಾಡುವೆ ಏಕಂತ, ನೀ ಅಡಗಿ
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೆ, ನೀ ನಡೆವೇ
ಕಬ್ಬಿನ ಹಾಲಂತೆ, ನೀ ನುಡಿವೇ
ನನ್ನನು ಹೇಗಂತಾ, ನೀ ತಡೆವೇ
ಬಾರೆ ಪೂರ ಈಚೆಗೆ
ಕನಸೂ ನಿಜವಾದಂತೆ ಕನಸಾಗಿದೆ

ಚಲಿಸುವಾ ಚೆಲುವೇ
ಒಲಿಸಲೂ ಬರುವೇ

ನೂರು ನೂರು ಬಯಕೆಗಳ
ಪಾಠಶಾಲೆ ತೆರೆಯುವೆನು
ತಿಳಿಸುತಲೇ ಕಲಿಯುವೆನು
ಜೋಡಿಯಾಗಿ ಹೆಸರುಗಳಾ
ಗೀಚಿ ನೋಡಿ ಅಳಿಸುವೆನು
ಸನಿಹದಲೇ ಸುಳಿಯುವೆನು
ಯಾರೂನೂ ಕಾಣದಲ್ಲಿ ಸೇರೋಣ
ಹಿತವಾಗಿ ಹಾರಿಕೊಂಡು ಹಾರಿ ಹೋಗೋಣ

ಬಿರಿವ ಬೆಳಕಿನ ಹೂವಂತೆ, ನೀ ಹುಡುಗಿ
ಚಂದದ ನೋವಂತೆ, ನೀ ಬೆಡಗಿ
ಕಾಡುವೆ ಏಕಂತ, ನೀ ಅಡಗಿ
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೆ, ನೀ ನಡೆವೇ
ಕಬ್ಬಿನ ಹಾಲಂತೆ, ನೀ ನುಡಿವೇ
ನನ್ನನು ಹೇಗಂತಾ, ನೀ ತಡೆವೇ
ಬಾರೆ ಪೂರ ಈಚೆಗೆ
ಕನಸೂ ನಿಜವಾದಂತೆ ಕನಸಾಗಿದೆ

ಚಲಿಸುವಾ ಚೆಲುವೇ
ಒಲಿಸಲೂ ಬರುವೇ

ಕಾದು ಕೂತ ಕನಸುಗಳ
ಕಾರುಬಾರು ನಡೆಯುತಿವೆ
ಹೃದಯದಲಿ ಹಗಲಿರುಳು
ಜೀವವೀಗ ಗರಿಗೆದರಿ
ಮೂಕವಾಗಿ ಚಿಗುರುತಿದೆ
ಉಸಿರುಗಳೂ ಬೆರೆತಿರಲು
ಕಣ್ಣಲ್ಲೇ ರೂಪರೇಖೆ ಹಾಕೋಣ
ಜೊತೆಯಾಗಿ ಭಾವಲೋಕ ದೋಚಿಕೊಳ್ಳೋಣ

ಬಿರಿವ ಬೆಳಕಿನ ಹೂವಂತೆ, ನೀ ಹುಡುಗಿ
ಚಂದದ ನೋವಂತೆ, ನೀ ಬೆಡಗಿ
ಕಾಡುವೆ ಏಕಂತ, ನೀ ಅಡಗಿ
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೆ, ನೀ ನಡೆವೇ
ಕಬ್ಬಿನ ಹಾಲಂತೆ, ನೀ ನುಡಿವೇ
ನನ್ನನು ಹೇಗಂತಾ, ನೀ ತಡೆವೇ
ಬಾರೆ ಪೂರ ಈಚೆಗೆ
ಕನಸೂ ನಿಜವಾದಂತೆ ಕನಸಾಗಿದೆ

ಚಲಿಸುವಾ ಚೆಲುವೇ



Credits
Writer(s): Jayanth Kaikini, G.v.prakash Kumar
Lyrics powered by www.musixmatch.com

Link