Elli Adagithu

ಎಲ್ಲಿ ಅಡಗಿತ್ತು ನನ್ನ ಹಾಡು
ನಿನ್ನ ಸೆಳೆತಕ್ಕೆ ಬಂತು ನೋಡು
ಸೋತೆ ಇರಲಿಲ್ಲ ಹೀಗೆ ನಾನು
ಏಕೆ ಬರಲಿಲ್ಲ ಬೇಗ ನೀನು
ತಂಗಾಳಿಗೂನು ಗೊತ್ತಾಗದಂತೆ
ನನ್ನಲ್ಲೇ ಮಾತು ಮುತ್ತಾಗುವಂತೆ
ತಲ್ಲೀನನಾದೆ ನಾ

ಎಲ್ಲಾ ಮರೆತು ನೀನು
ನನ್ನೇ ನೋಡುವಾಗ
ಎದೆಯಾಳದಲ್ಲಿ ಸಿಹಿಯಾದ ಜಾಗ ನಿನಗಾಗೇ ಕಾದಂತೆ
ಮನ ಲೂಟಿಯಾದಂತೆ

ಎಲ್ಲಿ ಅಡಗಿತ್ತು ನನ್ನ ಹಾಡು
ನಿನ್ನ ಸೆಳೆತಕ್ಕೆ ಬಂತು ನೋಡು

ಸಂತೆ ಬೀದಿಯಲ್ಲೂ
ನಿಂತೆ ಮೈಯ್ಯ ಮರೆತು
ನೆನೆವಾಗ ನಿನ್ನ ನವಿರಾದ ನೋವು
ಮರುಳಾದರೇನಂತೆ
ಮರು ಜನ್ಮ ಬಂದಂತೆ

ಎಲ್ಲಿ ಅಡಗಿತ್ತು ನನ್ನ ಹಾಡು
ನಿನ್ನ ಸೆಳೆತಕ್ಕೆ ಬಂತು ನೋಡು
ಸೋತೆ ಇರಲಿಲ್ಲ ಹೀಗೆ ನಾನು
ಏಕೆ ಬರಲಿಲ್ಲ ಬೇಗ ನೀನು
ತಂಗಾಳಿಗೂನು ಗೊತ್ತಾಗದಂತೆ
ನನ್ನಲ್ಲೇ ಮಾತು ಮುತ್ತಾಗುವಂತೆ
ತಲ್ಲೀನನಾದೆ ನಾ



Credits
Writer(s): Jayanth Kaikini, V Sridhar Murthy
Lyrics powered by www.musixmatch.com

Link