Kanninalli Kanaside

ಕಣ್ಣಿನಲ್ಲಿ ಕನಸಿದೆ
ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ, ರೆಪ್ಪೆಯಲ್ಲಿ ನೆನಪಿದೆ
ಬೆಳ್ಳಿ ಮೋಡ ತಳ್ಳಿ ಚಂದಿರ ಬಂದಂತೆ
ನನ್ನ ಬೆಳ್ಳಿ ಬೊಂಬೆ ಬರುತಾಳೆ
ಕಾಯುವೆ ಅವಳ ಪ್ರೀತಿಗಾಗಿ

ಕಣ್ಣಿನಲ್ಲಿ ಕನಸಿದೆ
ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ, ರೆಪ್ಪೆಯಲ್ಲಿ ನೆನಪಿದೆ

ಹೂವ ನಗುವಿನವಳು, ಹೃದಯ ಬೆಳಗುವವಳು
ಮಿಂಚು-ಮಿಂಚಿನಂತೆ ಕಣ್ಗಳು, ಬಳೆಯ ಸದ್ದಿನೊಳಗೆ ಬಲೆಯ ಬೀಸಿದವಳು
ಹೆಚ್ಚೇ ನೋಡು ನವಿಲುಗಳು ನನ್ನೋಳು ನಡೆದಾಡೋ ಈ ದಾರಿಗೆ
ನನ್ನೆದೆಯ ಹಣತೆನ ಹಚ್ಚುವೆ ಅವಳೆದೆಯ ಮಡಿಲಲ್ಲಿ ನಾ ಮಲಗಲು
ಹಗಲಿರುಳು ಕಣ್ ಮುಚ್ಚಿ ಕಾಯುವೆ, ನನ್ನುಸಿರು ಅವಳಲ್ಲಿದೆ

ಆಸೆ ಬೆಳೆಸಿದವಳು, ಪ್ರೀತಿ ಕಲಿಸಿದವಳು
ಇಲ್ಲೇ ಇದ್ದು ಎಲ್ಲೂ ಕಾಣಲು ಹೃದಯ ತೆರೆದಳಿವಳು, ಬಯಕೆ ಬರೆದಳಿವಳು
ದೂರ ಇದ್ದೂ ಉಸಿರಾದಳು, ನಾಳೆಗಳು ನನ್ನೋಳ ನೆರಳಲ್ಲಿದೆ
ಕನಸಿನ ಮನೆ ಕಟ್ಟಿ ಹಾಡುವೆ, ಕಾಲನೇ ನನ್ನೋಳ ಕಾಲಡಿ ಇದೆ
ಬದುಕೆಲ್ಲ ಅವಳಲ್ಲೇ ಬಾಳುವೆ, ನನ್ನೋಡೆ ನಾನಾಗುವೆ

ಕಣ್ಣಿನಲ್ಲಿ ಕನಸಿದೆ, ರೆಪ್ಪೆಯಲ್ಲಿ ನೆನಪಿದೆ
ಕಣ್ಣಿನಲ್ಲಿ ಕನಸಿದೆ, ರೆಪ್ಪೆಯಲ್ಲಿ ನೆನಪಿದೆ
ಬೆಳ್ಳಿ ಮೋಡ ತಳ್ಳಿ ಚಂದಿರ ಬಂದಂತೆ
ನನ್ನ ಬೆಳ್ಳಿ ಬೊಂಬೆ ಬರುತಾಳೆ
ಕಾಯುವೆ ಅವಳ ಪ್ರೀತಿಗಾಗಿ



Credits
Writer(s): K. Kalyan, S.a. Rajkumar
Lyrics powered by www.musixmatch.com

Link