Banna Bannada Loka

ಬಣ್ಣ ಬಣ್ಣದ ಲೋಕ ಬಣ್ಣಿಸಲು ಸಾಲದು ಈ ಸಾಲು

ಬಣ್ಣ ಬಣ್ಣದ ಲೋಕ ಬಣ್ಣಿಸಲು ಸಾಲದು ಈ ಸಾಲು
ಬಣ್ಣ ಬಣ್ಣದ ಲೋಕ ಬಣ್ಣಿಸಲು ಸಾಲದು ಈ ಸಾಲು
ಪ್ರೇಮ ಕನಸಾಯ್ತಲ್ಲ, ಬಣ್ಣ ಮಾಸಿ ಹೋಯ್ತಲ್ಲ
ಎಲ್ಲ ಮೋಸವಾಯಿತಲ್ಲ

ಏಕಾಂಗಿ ನಾನಮ್ಮ, ಪ್ರೇಮಾಂಗಿ ನಾನಮ್ಮ
ಅಪ್ಪ ಅಮ್ಮ ಇಲ್ಲಮ್ಮ, ನಿನ್ ಬಿಟ್ರೆ ನನಗ್ಯಾರಮ್ಮ?

ಬಣ್ಣ ಬಣ್ಣದ ಲೋಕ ಬಣ್ಣಿಸಲು ಸಾಲದು ಈ ಸಾಲು

ಹೇ, ಕನಸು ಮುಗಿದೋಯ್ತಾ?
ಮನಸಲಿ ಎಲ್ಲ ನಡೆದೋಯ್ತು, ಮನಸಲ್ಲೇ ಮುಗಿದೋಯ್ತು
ಹೇ, ಚಿಟ್ಟೆ ಹಾರೋಯ್ತಾ?
ಚಿಟ್ಟೆಯ ಬಣ್ಣ ನಾ ನೋಡಿಲ್ಲ, ಹೆಣ್ಣಿನ ಬಣ್ಣ ನಾ ಕಂಡಿಲ್ಲ
ಹಾರಿ ಹೋದ ಚಿಟ್ಟೆಯೇ, ನಿನ್ನ ಮನಸಲಿ ಏನಿತ್ತೇ?
ಮನಸಲ್ಲಿ ನಾನಿಲ್ವಾ? ನಿನಗೆ ಮನಸೇ ಇಲ್ವಾ?
ಮೋಸ ಮಾಡೋಕೆ ನಿನ್ಗೆ ಬೇರೆ ಯಾರೂ ಸಿಗಲಿಲ್ವಾ?

ಏಕಾಂಗಿ ನಾನಮ್ಮ, ಪ್ರೇಮಾಂಗಿ ನಾನಮ್ಮ
ಅಪ್ಪ ಅಮ್ಮ ಇಲ್ಲಮ್ಮ, ನಿನ್ ಬಿಟ್ರೆ ನನಗ್ಯಾರಮ್ಮ?

ಬಣ್ಣ ಬಣ್ಣದ ಲೋಕ ಬಣ್ಣಿಸಲು ಸಾಲದು ಈ ಸಾಲು

ಹೇ, ಪ್ರೀತಿ ಸತ್ತೋಯ್ತಾ?
ಸಾಧ್ಯ ಇಲ್ಲ, ಅಸಾಧ್ಯ ಎಲ್ಲ, ಸಾಯೋದಿಲ್ಲ ಈ ಪ್ರೀತಿ
ಹೇ, ಲೋಕ ನಿಂತೋಯ್ತಾ?
ಸೂರ್ಯ ಯಾಕೆ? ಚಂದ್ರ ಯಾಕೆ? ನೀನೆ ನನ್ನಾಕೆ
ಹಾರಿ ಹೋದ ಚಿಟ್ಟೆಯೇ, ನಿನ್ನ ಮನಸಲಿ ಏನಿತ್ತೇ?
ಮನಸಲ್ಲಿ ನಾನಿಲ್ವಾ? ನಿನಗೆ ಮನಸೇ ಇಲ್ವಾ?
ಮೋಸ ಮಾಡೋಕೆ ನಿನ್ಗೆ ಬೇರೆ ಯಾರೂ ಸಿಗಲಿಲ್ವಾ?

ಏಕಾಂಗಿ ನಾನಮ್ಮ, ಪ್ರೇಮಾಂಗಿ ನಾನಮ್ಮ
ಅಪ್ಪ ಅಮ್ಮ ಇಲ್ಲಮ್ಮ, ನಿನ್ ಬಿಟ್ರೆ ನನಗ್ಯಾರಮ್ಮ?

ಬಣ್ಣ ಬಣ್ಣದ ಲೋಕ ಬಣ್ಣಿಸಲು ಸಾಲದು ಈ ಸಾಲು



Credits
Writer(s): Ravichandran V
Lyrics powered by www.musixmatch.com

Link