Saaku Saakinnu

(ತಿರುಗಿ ನೀ ನೋಡುವೆಯಾ
ಕೂಗುತಿದೆ ಆ ಹೃದಯ)

ಒಂದೇ ಒಂದು ಸಾರಿ ಹೇಳಿಬಿಡಲೇ ಹೋಗೋ ಮುನ್ನ
ಎದೆಯ ಪರದೆ ಮೇಲೆ ಸವಿದ ನೆನಪು ಸವೆಯೋ ಮುನ್ನ
ಆ ದೇವರು ಕೊನೆಸಾಲನು ಕಣ್ಣೀರಲೇ ಬರೆದಂತಿದೆ

ಸಾಕು ಸಾಕು ಸಾಕು ಸಾಕಿನ್ನು ಈ ಜೀವಕೆ ನೀನೇ ಬೇಕಿನ್ನು
ಸಾಕು ಸಾಕು ಸಾಕು ಸಾಕಿನ್ನು ಕಣ್ಣೀರಿಗೂ ನೀನೇ ಬೇಕಿನ್ನು

ಗುದ್ದಾಡು ಮುದ್ದಾಡು ನೀನೇ ನನ್ನ ಗೆಳೆಯಾ, ಗೆಳೆಯಾ
ನಿನ್ನಲ್ಲಿ ಸೇರಿದೆ ತಾನಾಗೆ ನನ್ನ ಹೃದಯಾ, ಹೃದಯಾ
ನೋವಲ್ಲಿ ಜಾರಿದೆ ಕಣ್ಣಿರು ಸಾಲಾಗಿ
ಮೊದಲಿಂದ ಪ್ರೀತಿಸು ನನಗಾಗಿ
ಹೀಗೇಕೆ ನೋಡದೆ ನೀ ಹೋದೆ ಕಾಣದೆ

ಸಾಕು ಸಾಕು ಸಾಕು ಸಾಕಿನ್ನು ನೀನಿಲ್ಲದ ಪಯಣ ಯಾಕಿನ್ನು
ಸಾಕು ಸಾಕು ಸಾಕು ಸಾಕಿನ್ನು ನೀನಿಲ್ಲದ ನಾಳೆ ಯಾಕಿನ್ನು

ಹಿಂದೆಲ್ಲಾ ಆಡಿದ ಮಾತಲ್ಲೇ ಮುಳುಗುತಿದೆ ಮನಸೇ
ಆ ಮಾತು ಏನೆಂದು ಮತ್ತೊಮ್ಮೆ ನೀ ಬಿಡಿಸೆ, ತಿಳಿಸು
ಬಿಟ್ಹೋಗೋ ದಾರೀಲಿ ನೋವೊಂದು ಕಾಡಿದೆ
ಕೈ ಬೀಸಿ ಹೋಗಲು ಮನಸೇಕೋ ಬಾರದೆ
ನೀ ದೂರ ಹೋದರೆ ಇನ್ನೇಕೆ ಈ ಧರೆ

ಸಾಕು ಸಾಕು ಸಾಕು ಸಾಕಿನ್ನು ಈ ಜೀವಕೆ ನೀನೇ ಬೇಕಿನ್ನು
ಸಾಕು ಸಾಕು ಸಾಕು ಸಾಕಿನ್ನು ಕಣ್ಣೀರಿಗೂ ನೀನೇ ಬೇಕಿನ್ನು



Credits
Writer(s): Anilkumar, Shridhar V Samharam
Lyrics powered by www.musixmatch.com

Link