Shuru Shuru

ಶುರು ಶುರೂ ಈ ಪ್ರೀತಿಯು
ಥರ ಥರಾ ಪಜೀತಿಯು
ಕ್ಷಣ ಕ್ಷಣಾ ಕುತೂಹಲ
ನಿನ್ನಿಂದಲೇ ಈ ರೀತಿಯು
ಒಂಟಿಯಾಗಿ ಕೂತು ನಾ ಹಾಡು ಹಾಡಬೇಕು
ನಿದ್ಧೆಗಣ್ಣಿನಲ್ಲೂ ನಿನ್ನ ಹೆಸರು ಹೇಳಬೇಕು
ಈ ಪ್ರೀತಿಯನ್ನೋದ್ ಒಂದು ಅಚ್ಚರಿ

ಶುರು ಶುರೂ ಈ ಪ್ರೀತಿಯು
ಥರ ಥರಾ ಪಜೀತಿಯು

ಹಾಯಾಗೇ ಇದ್ಧ ನನ್ನ ಹೃದಯ
ಅಪಾಯದಲ್ಲಿ ಸಿಲುಕಿದೇ
ಹಾಳಾಗಿ ಹೋಯಿತಲ್ಲ ನಿದಿರೆ
ಉಪಾಯವೇನು ಇಲ್ಲದೇ
ನಿನ್ನ ಪರಿಚಯ ಅದೆಂಥ ವಿಸ್ಮಯ
ಕಣ್ಣು ಕಣ್ಣಲೇ ಈ ಭಾವ ವಿನಿಮಯ
ಎಲ್ಲೆಲ್ಲೂ ನಿನ್ನದೇನೆ ಹಾಜರಿ

ಶುರು ಶುರೂ ಈ ಪ್ರೀತಿಯು
ಥರ ಥರಾ ಪಜೀತಿಯು

ಖಯಾಲಿ ನಿನ್ನದೇನೆ ಈಗ
ಕಣ್ಣಲ್ಲಿ ಕನಸು ತೇಲಿದೆ
ಖವಾಲಿ ಒಂದು ಮೂಡುವಾಗ
ನನ್ನಲ್ಲಿ ನಿನದೆ ಗುಂಗಿದೆ
ಒಂಟಿ ಪಯಣಕೆ ನೀ ತಾನೇ ಸಾಥಿಯು
ನೀ ಸಿಕ್ಕಮೇಲೆಯೇ ಈ ಬದುಕು ಪೂರ್ತಿಯು
ಈ ಪ್ರೀತಿ ಅನ್ನೋದಿನ್ನು ಖಾತರಿ

ಶುರು ಶುರೂ ಈ ಪ್ರೀತಿಯು
ಥರ ಥರಾ ಪಜೀತಿಯು
ಕ್ಷಣ ಕ್ಷಣಾ ಕುತೂಹಲ
ನಿನ್ನಿಂದಲೇ ಈ ರೀತಿಯು
ಒಂಟಿಯಾಗಿ ಕೂತು ನಾ ಹಾಡು ಹಾಡಬೇಕು
ನಿದ್ಧೆಗಣ್ಣಿನಲ್ಲೂ ನಿನ್ನ ಹೆಸರು ಹೇಳಬೇಕು
ಈ ಪ್ರೀತಿಯನ್ನೋದ್ ಒಂದು ಹುಚ್ಚುರೀ



Credits
Writer(s): Hrudayashiva, Kiran Ravindranath
Lyrics powered by www.musixmatch.com

Link