Hegaadaru Ondagali

ಹೇಗಾದರೂ ಒಂದಾಗಲಿ ಈ ಭೂಮಿಯು ಆ ಬಾನಿಗೆ
ಇನ್ನಾದರೂ ಮಾತಾಡಲಿ ಈ ಜೀವವು ನಿನ್ನೊಂದಿಗೆ
ಆಮಂತ್ರಣ ಬಂತಾದರೂ ನನ್ನಲ್ಲಿದೆ ಈ ತಲ್ಲಣ
ಆಲಿಂಗನ ಕನಸಾದರೂ ಕಣ್ಣಲ್ಲಿದೆ ಹೂಕಂಪನ

ಹೇಗಾದರೂ ಒಂದಾಗಲಿ ಈ ಭೂಮಿಯು ಆ ಬಾನಿಗೆ
ಇನ್ನಾದರೂ ಮಾತಾಡಲಿ ಈ ಜೀವವು ನಿನ್ನೊಂದಿಗೆ

ಅನುವಾದ ಬೇಕೇ, ಈಗ ಹೊಸಭಾಷೆ ಗೀಚುವಾಗ ನಿನ್ನೆದೆಯ ಹಾಳೆಯಲ್ಲಿ ನಾ?
ಅಪರಾಧಿ ಭಾವವೀಗ ನಿನ್ನ ಸಾಕಿ ಕಾಡುವಾಗ, ಕ್ಷಮಿಸು ಅಪ್ಪಿ ನನ್ನನ
ನಿನ್ನ ಸ್ವಂತ ಧಾಟಿಗೆ ಲೂಟಿಯಾಗಿ ಹೋದೆನೆ
ಇಂಥ ಹಲವು ವೇದನೆ ನೀಡು ನೀನು ಸುಮ್ಮನೆ
ಅನುಸರಿಸು ನೀನೀಗ ನನ್ನನು

ಹೇಗಾದರೂ ಒಂದಾಗಲಿ ಈ ಭೂಮಿಯು ಆ ಬಾನಿಗೆ
ಇನ್ನಾದರೂ ಮಾತಾಡಲಿ ಈ ಜೀವವು ನಿನ್ನೊಂದಿಗೆ

ಅತಿಯಾಗಿ ಕಾಡಿತೀಗ ನೀ ನಿಂತುಹೋದ ಜಾಗ, ಏಕೆ ಗೈರುಹಾಜರಿ?
ಬೇರೇನೂ ತೋಚದೀಗ, ನೀ ನನ್ನೇ ನೋಡುವಾಗ, ಏನೀ ನಿನ್ನ ವೈಖರಿ?
ನೀನು ಜೊತೆಯಲಿದ್ದರೆ ದಾರಿ ಕಳೆದು ಹೋಗಲಿ
ಯಾರೂ ಇಲ್ಲದೂರಲಿ ಸಣ್ಣ ಡೇರೆ ಕಾಣಲಿ
ಸ್ವೀಕರಿಸು ನೀನೀಗ ನನ್ನನು

ಹೇಗಾದರೂ ಒಂದಾಗಲಿ ಈ ಭೂಮಿಯು ಆ ಬಾನಿಗೆ
ಇನ್ನಾದರೂ ಮಾತಾಡಲಿ ಈ ಜೀವವು ನಿನ್ನೊಂದಿಗೆ
ಆಮಂತ್ರಣ ಬಂತಾದರೂ ನನ್ನಲ್ಲಿದೆ ಈ ತಲ್ಲಣ
ಆಲಿಂಗನ ಕನಸಾದರೂ ಕಣ್ಣಲ್ಲಿದೆ ಹೂಕಂಪನ



Credits
Writer(s): Vikas Vashishta, Appu Kushal
Lyrics powered by www.musixmatch.com

Link