Shuruvaagide

ಶುರುವಾಗಿದೆ ಒಳಗೆ
ಅರಿವಾಗದೆ ನನಗೆ
ಒಲವೆಂಬ ಜಾದೂ ಮೆಲ್ಲಗೆ

ಶುರುವಾಗಿದೆ ಒಳಗೆ
ಅರಿವಾಗದೆ ನನಗೆ

ನಗುವಿನ ಬಲೆಗೆ ಸಿಲುಕಿದ ಘಳಿಗೆ
ನನ್ನ ಎದೆಯಲ್ಲಿ
ನಿನ್ನ ಹಸ್ತಾಕ್ಷರ
ನಡೆಯುವ ಜೊತೆಗೆ ನವಯುಗದೆಡೆಗೆ
ನಮ್ಮ ಬದುಕಲ್ಲಿ
ನವ್ಯ ಮನ್ವಂತನ
ಋತುಮಾನದಲ್ಲಿ ಹೊಸ ಕಳೆಯಿದೆ
ತಿಳಿ ಬಾನಿನಲ್ಲಿ ಹೊಸ ಪ್ರಭೆಯಿದೆ
ನಿನ್ನ ಕಿರುನಗೆಯ ಪರಿಗೆ

ಶುರುವಾಗಿದೆ ಒಳಗೆ
ಅರಿವಾಗದೆ ನನಗೆ

ಕಣ -ಕಣಗಳಿಗೆ ಅಮಲಿನ ಗುಳಿಗೆ
ನೀಡಿದೆ ನೀನು
ಆದೆ ನಾ ತತ್ತರ
ಕ್ಷಣದಲಿ ಸೆಳೆದೆ ಕನಸಲಿ ಸುಳಿದೆ
ನನ್ನನೇ ನಾನು ನಿಂಗೆ ಹಸ್ತಾಂತರ
ನಿದಿರೇನೇ ಇಲ್ಲ ಇರುಳಿರುಳಿಗೆ
ಮದಿರೇನೇ ಇಲ್ಲ ನನ್ನ ನೆರವಿಗೆ
ನೀನು ನನ ಕೊಲುವ ಪರಿಗೆ

ಶುರುವಾಗಿದೆ ಒಳಗೆ
ಅರಿವಾಗದೆ ನನಗೆ
ಒಲವೆಂಬ ಜಾದೂ ಮೆಲ್ಲಗೆ



Credits
Writer(s): Hrudaya Shiva, Guru Kiran
Lyrics powered by www.musixmatch.com

Link