E Khali Hrudaya

Hmm, hm-hmm, hm-hm-hmm
Hmm, hm-hmm, hmm, hmm

ಈ ಖಾಲಿ ಹೃದಯದ ಮೇಲೆ
ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲ್ಲಿ
ಈ ಮುದ್ದು ಮನಸನು ಒಮ್ಮೆ
ನೀ ಮುದ್ದಿಸಿ ನೋಡು ಸಾಕು
ನಾನಿರುವೆ ನಿನ್ನ ಜೊತೆಯಲ್ಲಿ
ಒಲವಿನ ಸಾಲಲಿ ಬಲೆಯ ಹಿಡಿದಿರುವೆ ನೀ
ಆ ಬಲೆಯಲಿ ಬಂಧಿಸಿ ನನ್ನ ಸೆಳೆದಿರುವೆ ನೀ

ಈ ಖಾಲಿ ಹೃದಯದ ಮೇಲೆ
ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲ್ಲಿ

ಮೊದಲನೆ ನೋಟಕೆ ಮನಸೋತೆ
ಮೊದಲನೆ ಮಾತಿಗೆ ಮರುಳಾದೆ
ಗುಂಡಿಗೆ ಗೂಡಲಿ ಮೊದಮೊದಲು
ಪ್ರೀತಿಯ ಗೀತೆಯು ಮೊಳಗುತಿದೆ

ಮುಡಿಯೋ ಈ ಹೃದಯವು ಇಂದು, ಮಿಡಿಯೋ ನರನಾಡಿಗಳಿಂದು
ತುಡಿಯೋ ಈ ಮನಸಿದು ನಿನ್ನೇ ಸ್ಮರಿಸುತಿದೆ
"ದೇವಿ, ಎದೆಯ ಕದವನ್ನು ತೆರೆಯೇ" ಎನ್ನುತಿದೆ
ಬರುವೆನು ನಿನ್ನ ಮನದ ಮನೆಗೆ
ಇರಿಸಿಕೋ ನನ್ನ ಕೊನೆಯವರೆಗೆ

ಈ ಖಾಲಿ ಹೃದಯದ ಮೇಲೆ
ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲ್ಲಿ

ಹೃದಯವು ಹಾಡಿದೆ ದಿನವೆಲ್ಲ
ಮನವಿದು ಹಾರಿದೆ ಮುಗಿಲೆಲ್ಲ
ನಿನ್ನಯ ನೆನಪಲೇ ಹಸಿವಿಲ್ಲ
ಬಳಿ ಇರೆ ಸ್ವರ್ಗವೇ ಧರೆಯೆಲ್ಲ

ಆಡೋ ಮಾತೆಲ್ಲ ವೇದ, ಕೇಳೋ ದನಿಯೆಲ್ಲ ನಾದ
ನಿನ್ನ ಒಲವಲ್ಲೇ ಮನಸು ಮಂದಾರ
ನಿನ್ನ ಸವಿಯ ನೆನಪೊಂದೆ ಇಲ್ಲಿ ಶೃಂಗಾರ
ಹೃದಯವು ಇಂದು ಕೇಳಿದೆ ನಿನ್ನ
ಬೇಗನೆ ಬಂದು ಸೇರಿಕೊ, ಚಿನ್ನ

ಈ ಖಾಲಿ ಹೃದಯದ ಮೇಲೆ
ನೀ ಬರೆದೆ ಒಲವಿನ ಓಲೆ
ನಾ ತೇಲಿದೆ ನಿನ್ನ ಗುಂಗಲ್ಲಿ
ಈ ಮುದ್ದು ಮನಸನು ಒಮ್ಮೆ
ನೀ ಮುದ್ದಿಸಿ ನೋಡು ಸಾಕು
ನಾನಿರುವೆ ನಿನ್ನ ಜೊತೆಯಲ್ಲಿ
ಒಲವಿನ ಸಾಲಲಿ ಬಲೆಯ ಹಿಡಿದಿರುವೆ ನೀ
ಆ ಬಲೆಯಲಿ ಬಂಧಿಸಿ ನನ್ನ ಸೆಳೆದಿರುವೆ ನೀ



Credits
Writer(s): Sai Kiran, Ravi Shankarnag
Lyrics powered by www.musixmatch.com

Link