Maleya Haniyelli

ಮಳೆಯ ಹನಿಯಲ್ಲಿ ಕೂತು
ಇಳೆಗೆ ಬಂದಂತೆ ಮುಗಿಲು
ಅಲೆಯ ಮಡಿಲಲ್ಲಿ ಕೂತು
ಬಳಿಗೆ ಬಂದಂತೆ ಕಡಲು
ನನ್ನೆಲ್ಲ ಋತುಮನವನ್ನು, ನಿನಗಿಗಾ ನಾ ನೀಡಬೇಕು
ಗೆಳತಿ ಬೇಡೆನ್ನ ಬೇಡ
ತುಸು ದೂರ ಜೊತೆ ನಡೆಯಬೇಕು
ಮಳೆಯ ಹನಿಯಲ್ಲಿ ಕೂತು

ಹಸುಗೂಸಾಗಿ ನೀ ನಡೆವಾಗ
ಹಿಡಿ ಮುದ್ದಾಗಿ ನನ್ನ ಕಿರು ಬೆರಳು
ಹದಿಹರೆಯದಿ ಹಾರಾಡು ಬೇಗ
ನಿನ್ನ ಗರಿಯಾಗಿ ನಾನೇ ಇರಲು
ಅನುರಾಗದ ಬುತ್ತಿಯಿಂದ, ಕೈತುತ್ತು ನಾ ನೀಡಬೇಕು
ಗೆಳತಿ ಬೇಡೆನ್ನ ಬೇಡ
ತುಸು ದೂರ ಜೊತೆ ನಡೆಯಬೇಕು

ಅಲೆಯ ಮಡಿಲಲ್ಲಿ ಕೂತು
ಬಳಿಗೆ ಬಂದಂತೆ ಕಡಲು

ಪುಟ ಹರಿದಂತ ಈ ದಿನಚರಿಗೆ
ಏಕೆ ಸೇರಿಸುವೆ ಹೊಸ ಪುರವಣಿಯ
ಇನ್ನು ಜೋರಾಗಿ ದೀಪವೇ ಬೆಳಗು
ದೂರ ಕೈಕಟ್ಟಿ ನಿಲ್ಲಲಿ ಸಮಯ
ಮಸುಕಾದ ಈ ಬಾಳ ರೇಖೆ
ಹೊಸದಾಗಿಯೇ ಕೊರೆಯಬೇಕು
ಗೆಳತಿ ಬೇಡೆನ್ನ ಬೇಡ
ತುಸು ದೂರ ಜೊತೆ ನಡೆಯಬೇಕು

ಮಳೆಯ ಹನಿಯಲ್ಲಿ ಕೂತು
ಇಳೆಗೆ ಬಂದಂತೆ ಮುಗಿಲು
ಅಲೆಯ ಮಡಿಲಲ್ಲಿ ಕೂತು
ಬಳಿಗೆ ಬಂದಂತೆ ಕಡಲು
ನನ್ನೆಲ್ಲ ಋತುಮನವನ್ನು, ನಿನಗಿಗಾ ನಾ ನೀಡಬೇಕು
ಗೆಳತಿ ಬೇಡೆನ್ನ ಬೇಡ
ತುಸು ದೂರ ಜೊತೆ ನಡೆಯಬೇಕು



Credits
Writer(s): Mano Murthy, Jayanth Kaikini
Lyrics powered by www.musixmatch.com

Link