Kana Kanade

ಕಣ ಕಾಣದೆ ಶಾರದೇ
ಕಲೆತಿಹಳು ಕಾಣದೆ
ವನ ವನದಲ್ಲೂ ಕುಹೂ ಕುಹೂ ಗಾನ
ಝರಿ ಝರಿಯಲ್ಲೂ ಝುಳು ಝುಳು ಧ್ಯಾನ
ವಿಧ ವಿಧದಾ ನಾದ ಅವಳು ನುಡಿಸುತಿಹಳು
ಕಣ ಕಾಣದೆ ಶಾರದೇ
ಕಲೆತಿಹಳು ಕಾಣದೆ

ಜನನಕು ಹಾಡು ಮರಣಕು ಹಾಡು
ಲಾಲಿ ಚರಮಗಳು
ಪ್ರತಿ ಎದೆಯಾಳ ದುರುಲಯ ತಾಳ
ಗೀತೆ ಬದುಕಿನಲೂ
ಕೊರಳಿನಲಿ
ಕೊಳಲಿನಲಿ
ಚೆಲುವಿನಲಿ
ಒಲವಿನಲಿ
ಒಲಿದು ನುಲಿದು ನಲಿದು ಹರಿದು
ಬರುವುದು ಶ್ರುತಿಲಯವು

ಕಣ ಕಾಣದೆ ಶಾರದೇ
ಕಲೆತಿಹಳು ಕಾಣದೆ

ಕುಲನೆಲದಾಚೆ ಅರಿಯುವ ಭಾಷೆ
ಒಂದೇ ಜಗದೊಳಗೆ
ಅವರಿವರಿಲ್ಲ ಸರಿಸಮರೆಲ್ಲ
ಸಪ್ತ ಸ್ವರಗಳಿಗೆ

ನಿ ಪ ಮ ಪ ನಿ
ಸ ನಿ ಪ ನಿ ಸ
ಗ ಸ ನಿ ಸ ಗ
ಮ ಪ ಮ ಪ ಗ
ನಿ ಪ ಮ ಪ ಸ ನಿ ಪ ನಿ
ಗ ಸ ನಿ ಸ

ಕಣ ಕಾಣದೆ ಶಾರದೇ
ಕಲೆತಿಹಳು ಕಾಣದೆ
ವನ ವನದಲ್ಲೂ ಕುಹೂ ಕುಹೂ ಗಾನ
ಝರಿ ಝರಿಯಲ್ಲೂ ಝುಳು ಝುಳು ಧ್ಯಾನ
ವಿಧ ವಿಧದಾ ನಾದ ಅವಳು ನುಡಿಸುತಿಹಳು

ಕಣ ಕಾಣದೆ ಶಾರದೇ
ಕಲೆತಿಹಳು ಕಾಣದೆ



Credits
Writer(s): V. Nagendra Prasad, Sreelekha M M
Lyrics powered by www.musixmatch.com

Link