Cheluva Prathime

ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು
ಮಧುರ ಸಂಗೀತ ನೀನು
ಹೃದಯ ಸಂಗಾತಿ ನಾನು

ಹೋ, ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು
ಮಧುರ ಸಂಗೀತ ನೀನು
ಹೃದಯ ಸಂಗಾತಿ ನಾನು

ಹೋ, ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು

ಜೀವನ ಕಡಲಲ್ಲಿ ನೀ
ಗಂಗೆ ಸಂಗಮದಂತೆ
ಬೆರೆಯ ಓಡೋಡಿ ಬಂದೆ

ಪ್ರೇಮದ ಹೊಸ ಬಾನಲಿ
ಲಜ್ಜೆ ಕೆಂಪೇರಿದಂತೆ
ನೀನು ರಂಗನ್ನೇ ತಂದೆ
ಚೆಲುವನು ಸೂಸಿ
ಬಲೆಯನು ಬೀಸಿ
ಚೆಲುವನು ಸೂಸಿ, ಬಲೆಯನು ಬೀಸಿ
ಸೆಳೆದ ಸೊಗಸು ನಿಂದೇನು, ಹೋ

ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು
ಮಧುರ ಸಂಗೀತ ನೀನು
ಹೃದಯ ಸಂಗಾತಿ ನಾನು, ಹೋ

ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು

ಪ್ರೀತಿಗೆ ಮುಳ್ಳಾಗಿಹ
ತೆರೆಯು ದೂರಾಗಬೇಕು
ಮನಸು ಒಂದಾಗಬೇಕು

ಕಂಬನಿ ಈ ಕಣ್ಣಲಿ
ಇಂದು ಕೊನೆಯಾಗಬೇಕು
ನಗುತ ನೀನಿರಬೇಕು
ಜೀವವು ನೀನು
ದೇಹವು ನಾನು
ಜೀವವು ನೀನು, ದೇಹವು ನಾನು
ಮನವ ಕವಿದ ನೋವೇನು, ಹೋ

ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು
ಮಧುರ ಸಂಗೀತ ನೀನು
ಹೃದಯ ಸಂಗಾತಿ ನಾನು, ಹೋ

ಚೆಲುವ ಪ್ರತಿಮೆ ನೀನು
ನಲಿವ ರಸಿಕ ನಾನು



Credits
Writer(s): Rajan, Nagendra, R.n. Jayagopal
Lyrics powered by www.musixmatch.com

Link