Vedanthi Helidanu

ವೇದಾಂತಿ ಹೇಳಿದನು, ಹೊನ್ನೆಲ್ಲ ಮಣ್ಣು, ಮಣ್ಣು
ಕವಿಯೊಬ್ಬ ಹಾಡಿದನು, ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು, ಹೊನ್ನೆಲ್ಲ ಮಣ್ಣು, ಮಣ್ಣು
ಕವಿಯೊಬ್ಬ ಹಾಡಿದನು, ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು,ಈ ಹೆಣ್ಣು ಮಾಯೆ ಮಾಯೆ
ಕವಿಯೊಬ್ಬ ಕನವರಿಸಿದನು, ಓ ಇವಳೇ ಚೆಲುವೆ
ಇವಳ ಜೊತೆಯಲ್ಲಿ ನಾನು ಸ್ವರ್ಗವನೇ ಗೆಲ್ಲುವೆ, ಸ್ವರ್ಗವನೇ ಗೆಲ್ಲುವೆ

ವೇದಾಂತಿ ಹೇಳಿದನು, ಹೊನ್ನೆಲ್ಲ ಮಣ್ಣು, ಮಣ್ಣು
ಕವಿಯೊಬ್ಬ ಹಾಡಿದನು, ಮಣ್ಣೆಲ್ಲ ಹೊನ್ನು ಹೊನ್ನು

ವೇದಾಂತಿ ಹೇಳಿದನು, ಈ ಬದುಕು ಶೂನ್ಯ, ಶೂನ್ಯ
ಕವಿ ನಿಂತು ಸಾರಿದನು, ಓ, ಇದು ಅಲ್ಲ ಶೂನ್ಯ
ಜನ್ಮ ಜನ್ಮದಿ ಸವಿದೆ, ನಾನೆಷ್ಟು ಧನ್ಯ, ನಾನೆಷ್ಟು ಧನ್ಯ

ವೇದಾಂತಿ ಹೇಳಿದನು, ಹೊನ್ನೆಲ್ಲ ಮಣ್ಣು, ಮಣ್ಣು
ಕವಿಯೊಬ್ಬ ಹಾಡಿದನು, ಮಣ್ಣೆಲ್ಲ ಹೊನ್ನು ಹೊನ್ನು
ವೇದಾಂತಿ ಹೇಳಿದನು, ಹೊನ್ನೆಲ್ಲ ಮಣ್ಣು, ಮಣ್ಣು
ಕವಿಯೊಬ್ಬ ಹಾಡಿದನು, ಮಣ್ಣೆಲ್ಲ ಹೊನ್ನು ಹೊನ್ನು
ಮಣ್ಣೆಲ್ಲ ಹೊನ್ನು ಹೊನ್ನು
ಮಣ್ಣೆಲ್ಲ ಹೊನ್ನು ಹೊನ್ನು

Credits
Writer(s): Vijaya Bhaskar, G.s. Shivarudrappa
Lyrics powered by www.musixmatch.com

Link