San Sanare

ಸ ಸನನನರೆ
ಹೇಳು ನೀ ಯಾರೇ?
ಢಮ್ ಢಮರು ಢಮರೇ
ಯಾರೇ ನೀ ಯಾರೇ?

ಸ ಸನನನರೆ
ಹೇಳು ನೀ ಯಾರೇ?
ಢಮ್ ಢಮರು ಢಮರೇ
ಯಾರೇ ನೀ ಯಾರೇ?
ಸೂರ್ಯಂಗೂ ನೋಡೋ ಆಸೆ
ಮೈಯನ್ನು ಮುಟ್ಟೋ ಆಸೆ
ಎಲ್ಲೋದ್ರೂ ಅಲ್ಲೇ ಬರ್ತಾನೆ
ತಂಗಾಳಿಗೂ ಭಾರಿ ಆಸೆ
ಏನೇನೋ ಮಾಡೋ ಆಸೆ
ಆಗಾಗ ಸವರಿ ಹೋಗ್ತಾನೆ

ಸ ಸನನನರೆ
ಹೇಳು ನೀ ಯಾರೇ?
ಢಮ್ ಢಮರು ಢಮರೇ
ಯಾರೇ ನೀ ಯಾರೇ?
ತು ತುಳುಕಿ ತುಳುಕಿ ಬಾರೆಲೇ ಬಾರೇ
ಝುಮ್ ಝುಮುಕಿ ಝುಮುಕಿ ನನ್ನನು ಸೇರೆ

ಎಳೆಗರಿಕೆ ವಯಸ್ಸಿಗೆ ಬಂತು, ನಾ ಹೆಜ್ಜೆ ಇಟ್ಟಾಗ
ಶ್ರೀಗಂಧಕ್ಕೂ
ಆಶ್ಚರ್ಯವೋ
ತೆನೆ ತೆನೆಗೂ ಮೀಸೆ ಬಂತು ನಾ ಕೈ ಇಟ್ಟಾಗ
ಹೂವೆಲ್ಲವೂ
ಗಂಡಾದವು
ನನ್ನ ಅಂದ ನೋಡೋಕೆ
ಸ್ವಂತ ಮಾಡಿ ಕೊಳ್ಳೋದಕ್ಕೆ
ನಾನೂ ನಾನೂ ನಾನಂತ
ಎಲ್ಲರಿಗೂ ಧಾವಂತ
ಸುಂದ್ರಿ ಯಾರು ಅನ್ನೋ ಸ್ಪರ್ಧೆ ನೋಡೋ ಭೂಮಿಲಿ
ಆ ಗಿಳಿನಾ ಈ ಹೊಳೆನಾ ಆ ಎಲೆನಾ ಈ ನೆಲಾನಾ
ಆ ಮೊಲಾನಾ ಈ ಮಳೇನಾ ನಾನೂ ಮಾತ್ರಾನಾ

ಹೇ ಮಳೆ ಹನಿಯೇ
ಪೋಕಿರಿ ನೀನು
ಮೈ ನೆನೆಸಿ ನೆನೆಸಿ
ನೋಡುವೆ ಏನು?
ಹೇ ಮಳೆ ಹನಿಯೇ ಪೋಕಿರಿ ನೀನು
ಮೈ ನೆನೆಸಿ ನೆನೆಸಿ
ನೋಡುವೆ ಏನು?

ಭೂರಮೆಯೂ ಮೈತುಂಬೊವ್ಳೆ
ಒಸಗೇನಾ ಬೇಡವ್ಳೆ
ಸುವ್ವಿ ಪದ
ನಾ ಹಾಡುವೆ
ಹಸಿರಾಗಿ ವೈನಾಗವ್ಳೆ
ಮೈ ಮನಸೆ ಹೊಂಬಾಳೆ
ಮಡಿಲಕ್ಕಿಯ
ನಾ ನೀಡುವೆ
ಗಿಳಿ ಗುಬ್ಬಿ ಗೊರವಂಕ ಬಿಟ್ಟು ಬನ್ನಿ ನಿಮ್ಮ ಬಿಂಕ
ಅಂಕೆ ಶಂಕೆ ಆತಂಕ ಇಲ್ಲ ಇನ್ನೂ ಕೊನೆತಂಕ
ಇಡೀ ಭೂಮಿ ಈಗ ನನ್ನನ್ನನ್ನನ್ನನ್ನಂಗೆ
ಕೆತ್ತನೆನೋ ಬಿತ್ತನೆನೋ
ಕಲ್ಪನೆನೋ ವಾಸ್ತವನೋ
ಕಪ್ಪು ಮೋಡ ದೃಷ್ಟಿ ಬೊಟ್ಟು ನನ್ನ ಕೆನ್ನೆಗೆ

ಸ ಸನನನರೆ
ಹೇಳು ನೀ ಯಾರೇ?
ಢಮ್ ಢಮರು ಢಮರೇ
ಯಾರೇ ನೀ ಯಾರೇ?
ಸ ಸನನನರೆ



Credits
Writer(s): Nagendra Prasad, V Harikrishna
Lyrics powered by www.musixmatch.com

Link