Chandana Siri

ಚಂದನ ಸಿರಿ ಚಂದನ ಸಿರಿ
ಚೆಲ್ಲು ಚೆಲ್ಲು ಚಿಗರೆ ಮರಿ
ನಮ್ಮ ಮಹಾಲಕ್ಷ್ಮೀ
ಘಲ್ ಘಲ್ ಎನ್ನುತ ಬಂದಳೋ
ಹೇ ನಿಂತರು ಸರಿ ಕುಂತರು ಸರಿ
ನಕ್ಕರಿವಳು ನವಿಲುಗರಿ
ಅಮ್ಮ ಅಮಮ್ಮ ಮನೆಗೆ ದೀಪಾವಳಿ ತಂದಳು
ಹೇ ಘಮ್ ಅಂತ ಅರಳುತಿದೆ
ನಮ್ಮ ಮನೆಯ ಈ ಮೊಗ್ಗು
ಕಣ್ತುಂಬ ಕನಸು ಇದೆ
ಆದರೂ ಯಾಕೋ ಈ ಸಿಗ್ಗು
ಅಚ್ಚಚ್ಚಚ್ಚೋ ಬೆಲ್ಲದಚ್ಚೋ
ಇನ್ನು ಮನೆ ತುಂಬ ಡುಂ ಡುಂ ಡುಂ ತುತ್ತೂರಿ

ಚಂದನ ಸಿರಿ ಚಂದನ ಸಿರಿ
ನಮ್ಮ ಮಹಾಲಕ್ಷ್ಮೀ
ಘಲ್ ಘಲ್ ಎನ್ನುತ ಬಂದಳೋ

ನಿನ್ನ ಹೆಜ್ಜೆಯನು ಕಂಡರೆ
ಹಂಸೆ ನಡೆಯಲು ಮರೆತು
ತಾಳ ಹಾಕಲು ಕೂರುವುದು
ನಿನ್ನ ಲಜ್ಜೆಯನು ಕಂಡರೆ
ಕೋಗಿಲೆ ಹಾಡಲು ಮರೆತು
ಗಟ್ಟಿಮೇಳ ಶುರು ಮಾಡುವುದು
ಮದುವೆಗಳ ಬಂಧನವು
ಸ್ವರ್ಗದಲೇ ಆರಂಭ
ಈ ಚೆಲುವೆಯ ಮದುವೆ ಸ್ವರ್ಗದ ಪ್ರತಿಬಿಂಬ
ಹೃದಯದಲಿ ಮನೆಕಟ್ಟಿ
ಪ್ರೀತಿಸಿರಿ ಹಾರುತ ದಿನ ದಿನ
ನಿಂತರು ಸರಿ ಕುಂತರು ಸರಿ
ನಮ್ಮ ಮಹಾಲಕ್ಷ್ಮೀ
ಮನೆಗೆ ದೀಪಾವಳಿ ತಂದಳು

ರಂಗಮ್ಮ ರಂಗಿ ರಂಗೇರ್ತವ್ಳೇ
ಮುಚ್ಚಿಟ್ಟ ಮನ್ಸು ಬಿಚ್ಚಿಡ್ತಾವ್ಳೇ
ಬಿಂಕಕ್ಕೆ ಬಿಗುಮಾನ ಸೇರಿಸ್ತಾವ್ಳೇ
ಅಲ್ಲೂ ಸೋಬಾನೆ ಚಿಕ್ಕವನ್ ಪದ ಹೇಳ್ತಾವ್ಳೇ

ಹೆತ್ತ ಮನೆಗಿವಳು ನಂದ ದೀಪ ನಗುವ ದೀಪ
ಮೆಟ್ಟೋ ಮನೆಗಿವಳು ಪ್ರತಿರೂಪಾ
ಕಷ್ಟ ಸುಖಗಳೆಲ್ಲ ತನ್ನದು ಎಂದು ತನ್ನವರೆಂದು
ಮನೆ ಬೆಳಗುವಳು ಈ ರೂಪಾ
ಕಣ್ಣೀರ ಮರೆಸುತ್ತ ಕತ್ತಲೆಯ ಕಳೆಯುವಳೋ
ಎದುರಾಡೋ ಮಾತಿಲ್ಲ ಅದೃಷ್ಟ ದೇವತೆಯೋ
ವಂದಿಸುವೆ ದೇವರಿಗೆ ಅತ್ತಿಗೆಯೇ ನಮ್ಮ ಬಾಳಿನ ತೋರಣ

ಚಂದನ ಸಿರಿ ಚಂದನ ಸಿರಿ
ನಮ್ಮ ಮಹಾಲಕ್ಷ್ಮೀ
ಘಲ್ ಘಲ್ ಎನ್ನುತ ಬಂದಳೋ
ಘಮ್ ಅಂತ ಅರಳುತಿದೆ
ನಮ್ಮ ಮನೆಯ ಈ ಮೊಗ್ಗು
ಕಣ್ತುಂಬ ಕನಸು ಇದೆ
ಆದರೂ ಯಾಕೋ ಈ ಸಿಗ್ಗು
ಅಚ್ಚಚ್ಚಚ್ಚೋ ಬೆಲ್ಲದಚ್ಚೋ
ಇನ್ನು ಮನೆ ತುಂಬ ಡುಂ ಡುಂ ಡುಂ ಪಿಪ್ಪಿಪ್ಪೀ

ಚಂದನ ಸಿರಿ ಚಂದನ ಸಿರಿ
ನಮ್ಮ ಮಹಾಲಕ್ಷ್ಮೀ
ಘಲ್ ಘಲ್ ಎನ್ನುತ ಬಂದಳೋ



Credits
Writer(s): M.m. Keeravani
Lyrics powered by www.musixmatch.com

Link