Chittegale

ಚಿಟ್ಟೆಗಳೇ ಚಿಟ್ಟೆಗಳೇ, ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ, ವಿರಹಿಗಳೇ ಹೀಗೆ, ಎಂದೂ ಹೀಗೆ
ನಗುವಂತೆ ಕಾಣುತಾರೆ
ಏನೇನೋ ಹೇಳುತಾರೆ
ಅಳುವಾಗ ಹಾಡುತಾರೆ
ಹಾಡಾಗಿ ಬಾಳುತಾರೆ

ಚಿಟ್ಟೆಗಳೇ ಚಿಟ್ಟೆಗಳೇ, ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ, ವಿರಹಿಗಳೇ ಹೀಗೆ, ಎಂದೂ ಹೀಗೆ

ಮಾತು ನಂಬಿಕೊಂಡು ಬಾಳುತಾರೆ
ಜೀವಮಾನವೆಲ್ಲ ಕಾಯುತಾರೆ
ಆಗದ ಹೋಗದ ಅಂಜಿಕೆ ಎಂದೂ ಇವರಿಗಿಲ್ಲ
ಚಂದಮಾಮನನ್ನು ಕೂಗುತಾರೆ
ಎದೆ ನೋವನೆಲ್ಲ ಹೇಳುತಾರೆ
ಕಾಣದು ಕೇಳದು ಯಾರಿಗೂ ಇವರ ಚಿಂತೆಯೆಲ್ಲ
ಮೆಚ್ಚಿದರೆ ಮಕ್ಕಳಂತೆ ಮೆಚ್ಚುವರು
ಹುಚ್ಚರಂತೆ ಪ್ರೀತಿಸುತ ಬಾಳುವರು
ನಗುವಂತೆ ಕಾಣುತಾರೆ, ಏನೇನೋ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ

ಚಿಟ್ಟೆಗಳೇ ಚಿಟ್ಟೆಗಳೇ, ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ, ವಿರಹಿಗಳೇ ಹೀಗೆ, ಎಂದೂ ಹೀಗೆ

ಬೀಸೋ ಗಾಳಿಯನ್ನು ಮುಚ್ಚುತಾರೆ
ಅಲ್ಲಿ ಗೋಪುರವ ಕಟ್ಟುತಾರೆ
ತೇಲುತ ಕಾಯುವ ಪ್ರೇಮಿಗೆ
ಜಾರೋ ಭಯವೇ ಇಲ್ಲ
ಲೋಕ ಪ್ರೀತಿಯನ್ನು ಬೆಂಕಿಯೆಂದರು
ಬೆಂಕಿ ಮೇಲೆ ನಿಂತು ಹಾಡುತಾರೆ
ಬೇಯುತ ಬಾಳುವ ವಿರಹಿಗೆ
ಸಾಯೋ ಭಯವೇ ಇಲ್ಲ
ನಂಬಿದರೆ ಅಂಧರಂತೆ ನಂಬುವರು
ಸೇರಿದರೆ ಜೀವದಂತೆ ಸೇರುವರು
ನಗುವಂತೆ ಕಾಣುತಾರೆ, ಏನೇನೋ ಹೇಳುತಾರೆ
ಅಳುವಾಗ ಹಾಡುತಾರೆ, ಹಾಡಾಗಿ ಬಾಳುತಾರೆ

ಚಿಟ್ಟೆಗಳೇ ಚಿಟ್ಟೆಗಳೇ, ಪ್ರೇಮಿಗಳೇ ಹೀಗೆ, ಎಂದೂ ಹೀಗೆ
ಹಕ್ಕಿಗಳೇ ಹಕ್ಕಿಗಳೇ, ವಿರಹಿಗಳೇ ಹೀಗೆ, ಎಂದೂ ಹೀಗೆ

Credits
Writer(s): Hamsalekha
Lyrics powered by www.musixmatch.com

Link