Kogile Kogile

ತನನನ ತನನಂ ತನನಂ

ಕೋಗಿಲೆ
ಕೋಗಿಲೆ
ಚೈತ್ರ ನಿನ್ನ ಬಾಗಿಲೇ
ಹೇಳೆಲೇ ಹೇಳೆಲೇ ಹೇಳೇ ಕೋಗಿಲೆ
ಕುಹೂ ಕುಹೂ ಕುಹೂಗಳ ನಡುವೆ
ನಿನ್ನ ಮನೆಯ ಹುಡುಕುತಲಿರುವೆ
ಪ್ರೇಮದೂರಿನೋಳೆ ನಂಗೆ ದಾರಿ ಹೇಳೆಲೇ

ಕೋಗಿಲೆ
ಕೋಗಿಲೆ
ಚೈತ್ರ ನಿನ್ನ ಬಾಗಿಲೇ
ಹೇಳೆಲೇ ಹೇಳೆಲೇ ಹೇಳೇ ಕೋಗಿಲೆ

ನಾ ಚಿಗುರೆಲೆ ಹಿಂದಿರುವೆ
ನಾ ಋತುಗಳ ಮುಂದಿರುವೆ
ನಾ ಬಯಸೋ ಎದೆ ತುಂಬ ನಲಿವೆ

ಬಾ ಬಾಗಿಲ ತೆರೆದಿಡುವೆ
ನೀ ನಡೆದಲ್ಲೆ ಹೂ ಹಾಸುವೆ

ಈ ನಿನ್ನ ಕವಿ ಮಾನಸ ಬಲ್ಲೆನು ಓ ಅಭಿಮಾನಿ

ನಿನ್ನ ಹೇಗೆ ಕಾಣಲಿ ಓ ಚಿಲಿಪಿಲಿ ರಾಣಿ

ಸರ ಸರ
ನಡೆಯಲೇ
ಅವಸರ
ಕರೆಯಲೇ
ಮುಜುಗರ
ಮರೆಯಲೇ
ಹೊಸ ಸ್ವರ
ಬರೆಯಲೇ

ಕೋಗಿಲೆ
ಕೋಗಿಲೆ
ಚೈತ್ರ ನಿನ್ನ ಬಾಗಿಲೇ
ಹೇಳೆಲೇ ಹೇಳೆಲೇ ಹೇಳೇ ಕೋಗಿಲೆ

ಬಾ ಕನಸಿನ ಕಣ್ಣವಳೇ
ಬಾ ಮಾದಕ ಧನಿಯವಳೇ
ಕೇಳಿರದ ಹೊಸ ಕವನ ಹೇಳೇ

ನಾ ಕಿನ್ನರ ಕುಲದವಳೋ
ನನ್ನ್ ಹೆಸರೇ ಬಿಸಿ ಕವನ ಕೇಳೋ

ನೀ ತಾನೇ ಎಳೆ ಮಾನಸ ಗೆಲ್ಲುವ ಗೂಢಾಚಾರಿ
ನಾ ನಿನ್ನ ಒಳಮನಸ ಗಿಲ್ಲುವ ಚೋರಿ

ಚಿಲಿಪಿಲಿ
ಸುರಿಸಲೇ
ಕಚಗುಳಿ
ತರಿಸಲೇ
ನಲಿ ನಲಿ
ನಲಿಸಲೇ
ಗಲಿಬಿಲಿ
ಮರೆಸಲೇ

ಕೋಗಿಲೆ
ಕೋಗಿಲೆ
ಚೈತ್ರ ನಿನ್ನ ಬಾಗಿಲೇ
ಹೇಳೆಲೇ ಹೇಳೆಲೇ ಹೇಳೇ ಕೋಗಿಲೆ
ಕುಹೂ ಕುಹೂ ಕುಹೂಗಳ ನಡುವೆ
ನಿನ್ನ ಮನೆಯ ಹುಡುಕುತಲಿರುವೆ
ಪ್ರೇಮದೂರಿನೋಳೆ ನಂಗೆ ದಾರಿ ಹೇಳೆಲೇ



Credits
Writer(s): V. Manohar
Lyrics powered by www.musixmatch.com

Link