Ninthe Ninthe - From "Ninnindale "

(Say you love me
Say you love me)

ನಿಂತೆ, ನಿಂತೆ ಕಾಯುತ್ತಾ ಒಂಟಿ ಕಾಲಲ್ಲೇ
ಸೇರೋ ಆಸೆ ನಂಗೀಗ ನಿನ್ನ ತೋಳಲ್ಲೇ
ಕೂಗಿ ಹೇಳೋದಾ?
(Say you love me and take my breath away)
ಕೂಗಿ ಹೇಳೋದಾ ನಾನೇ ಲೋಕಕೆ?
ನೀನೇ ಸಂಗಾತಿ ನನ್ನ ಜೀವಕೆ
ನೋಡೋ ಕಡೆ ಎಲ್ಲ ಬರೀ ನೀನೇ ಮೂಡಿದ ಹಾಗೆ
ಹೋಗೋ ಕಡೆ ಎಲ್ಲ ನಿನ್ನ ದನಿಯೇ ಕೇಳಿದ ಹಾಗೆ

(Say you love me and take my breath away
Hey, baby, come for me and take my heart away)

ನೀನೇ ತಂಗಾಳಿ ನನ್ನ ಹಾದಿಲಿ
ನನ್ನ ಸಂಭ್ರಮ ಹೇಗೆ ನಿನಗೆ ಹೇಳಲಿ?
ಮುಳುಗೋ ಆಸೆ ನಂಗೀಗ ನಿನ್ನ ಕಣ್ಣಲಿ
ನಿನ್ನ ತೋಳಲೇ ನನ್ನ ಉಸಿರು ನಿಲ್ಲಲಿ

ನಾನು ತಾಳುವೆನು ನನಗಾಗೋ ನೋವನು
ನಿಂಗೆ ನೋವಾದರೆ ಅದ ನಾನು ತಾಳೆನು
ಸಾಗಲು ಮುಂದಕೆ, ತುಂಬಿದೆ ನಂಬಿಕೆ
ನೂಕಿದೆ ನನ್ನ ಮೋಹಕವಾದ ಲೋಕವೊಂದಕೆ

(Say you love me and take my breath away
Hey, baby, come for me and take my heart away)

ನೋಡು, ನಾ ಬಂದೆ ನಿನ್ನ ಹಿಂದಿಂದೆ
ನಿನ್ನ ಮೋಡಿಗೆ ನನ್ನ ಹೃದಯ ಹಿಗ್ಗಿದೆ
ನಿನ ಒಂದೊಂದು ಹೆಜ್ಜೆನೂ ನಂದೆ ಇನ್ಮುಂದೆ
ಅಷ್ಟೇ ಸಾಲದು, ನನ್ನ ಬದುಕು ನಿನ್ನದೇ

ನನ್ನ ಉಸಿರಾಡೋ ಪಿಸುಮಾತು ಆಲಿಸು
ನಿನ್ನ ನೆರಳಾಗುವ ಅವಕಾಶ ಕಲ್ಪಿಸು
ಎಲ್ಲವ ಗೆಲ್ಲುವೆ ನೀ ಜೊತೆ ನಿಂತರೆ
ತಲ್ಲಣವೇಕೋ ಸ್ವಲ್ಪವೇ ನೀನು ದೂರ ಹೋದರೆ?

(Say you love me and take my breath away
Hey, baby, come for me and take my heart away)

ನಿಂತೆ, ನಿಂತೆ ಕಾಯುತ್ತಾ ಒಂಟಿ ಕಾಲಲ್ಲೇ
ಸೇರೋ ಆಸೆ ನಂಗೀಗ ನಿನ್ನ ತೋಳಲ್ಲೇ
ಕೂಗಿ ಹೇಳೋದಾ? ಕೂಗಿ ಹೇಳೋದಾ? (Say you love me and take my breath away)
ಕೂಗಿ ಹೇಳೋದಾ ನಾನೇ ಲೋಕಕೆ?
ನೀನೇ ಸಂಗಾತಿ ನನ್ನ ಜೀವಕೆ
ನೋಡೋ ಕಡೆ ಎಲ್ಲ ಬರೀ ನೀನೇ ಮೂಡಿದ ಹಾಗೆ
ಹೋಗೋ ಕಡೆ ಎಲ್ಲ ನಿನ್ನ ದನಿಯೇ ಕೇಳಿದ ಹಾಗೆ



Credits
Writer(s): Mani Sarma, Kaviraj
Lyrics powered by www.musixmatch.com

Link