Yaarivalu - From "Ganapa"

ಯಾರಿವಳು? ಯಾರಿವಳು ಪರಿಚಯವಿಲ್ಲದ ಪರಿಚಿತಳು?
ಯಾರವಳೋ? ಎಲ್ಲಿಹಳೋ? ಅವಳನೇ ಹುಡುಕಿವೆ ಕಣ್ಣುಗಳು
ಮನಸಲ್ಲೇ ಮನೆಯೊಂದ ಕಟ್ಟಿದಳು
ಎಲ್ಲಿಂದಲೋ ಕದವ ತಟ್ಟಿದಳು
ಕಾಣದೆ ಕಾಡುವಳು, ಕಣ್ಮರೆಯಾಗಿಹಳು

ಯಾರಿವಳು? ಯಾರಿವಳು ಪರಿಚಯವಿಲ್ಲದ ಪರಿಚಿತಳು?
ಯಾರವಳೋ? ಎಲ್ಲಿಹಳೋ? ಅವಳನೇ ಹುಡುಕಿವೆ ಕಣ್ಣುಗಳು

ಆಹಾ! ಮಾತಾಡದ ಶಿಲ್ಪ ಮಾತಾಡಿದೆ
ಈ ಹೃದಯಕ್ಕೆ ತಾನಾಗೇ ನಂಟಾಗಿದೆ
ನೀ ನಡೆದಾಡುವ ದೇವರ ರೂಪವೇ
ನೀ ಸುಡಲಾರದ ಸುಂದರ ದೀಪವೇ
ಓ, ಬ್ರಹ್ಮ, ಈ ಸೃಷ್ಟಿ ನಿನ್ನದೇನಾ?
ಕೈಜಾರಿ ಹೋದಂತೆ ನನ್ನ ಪ್ರಾಣ
ಸದ್ದಿರದೆ ಕದ್ದಿರುವೆ ನಿದ್ದೆಗಳ ಈ ನಡುವೆ
ಅದು ಯಾಕೋ, ಏನೋ ಕಾಣೆ
ಮರೆತಂತೆ ನನ್ನೇ ನಾನೇ

ಯಾರಿವಳು? ಯಾರಿವಳು ಪರಿಚಯವಿಲ್ಲದ ಪರಿಚಿತಳು?
ಯಾರವಳೋ? ಎಲ್ಲಿಹಳೋ? ಅವಳನೇ ಹುಡುಕಿವೆ ಕಣ್ಣುಗಳು

ಈ ಸಂಬಂಧವೇನೆಂದು ನಾನರಿಯೆನು
ಈ ಅನುಬಂಧವೇಕೆಂದು ನಾ ತಿಳಿಯೆನು
ನಾ ಯಾರಲ್ಲಿ ಹೇಳೋದು ಈ ಸೊಗಸನು
ಈ ಕಥೆಯಲ್ಲಿ ನಾನೀಗ ಬಲು ಹೊಸಬನು
ನೀ ನನ್ನ ಹಿಂದಿರುಗಿ ನೋಡು ಒಮ್ಮೆ
ನೆರಳಾಗಿ ಬಂದಿರುವೆ ನಿನ್ನ ಹಿಂದೆ
ಕಾಣಿಸದೆ ಕಾಯಿಸಿದೆ, ನೋಯಿಸದೆ ಸಾಯಿಸಿದೆ
ಅದು ಯಾಕೋ, ಏನೋ ಕಾಣೆ
ಮರೆತಂತೆ ನನ್ನೇ ನಾನೇ

ಯಾರಿವಳು? ಯಾರಿವಳು ಪರಿಚಯವಿಲ್ಲದ ಪರಿಚಿತಳು?
ಯಾರವಳೋ? ಎಲ್ಲಿಹಳೋ? ಅವಳನೇ ಹುಡುಕಿವೆ ಕಣ್ಣುಗಳು
ಮನಸಲ್ಲೇ ಮನೆಯೊಂದ ಕಟ್ಟಿದಳು
ಎಲ್ಲಿಂದಲೋ ಕದವ ತಟ್ಟಿದಳು
ಕಾಣದೆ ಕಾಡುವಳು, ಕಣ್ಮರೆಯಾಗಿಹಳು

ಯಾರಿವಳು? ಯಾರಿವಳು ಪರಿಚಯವಿಲ್ಲದ ಪರಿಚಿತಳು?
ಯಾರವಳೋ? ಎಲ್ಲಿಹಳೋ? ಅವಳನೇ ಹುಡುಕಿವೆ ಕಣ್ಣುಗಳು



Credits
Writer(s): Chinnmaya, Karan.b. Krupa
Lyrics powered by www.musixmatch.com

Link